alex Certify ಕಪ್ಪು ತುಟಿಗೆ ಇಲ್ಲಿದೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪು ತುಟಿಗೆ ಇಲ್ಲಿದೆ ಮನೆ ಮದ್ದು

ಧೂಮಪಾನ ಮಾಡುವವರ ತುಟಿ ಕಪ್ಪಾಗುತ್ತೆ. ಇದು ಅವರ ಸೌಂದರ್ಯಕ್ಕೊಂದು ಕಪ್ಪುಚುಕ್ಕೆ. ಹಾಗೆ ಚಳಿಗಾಲದಲ್ಲಿ ಧೂಮಪಾನ ಮಾಡದವರ ತುಟಿ ಕೂಡ ಕಪ್ಪಾಗುವುದುಂಟು. ಗುಲಾಬಿ ತುಟಿ ಪಡೆಯಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸ್ತಾರೆ.

ಆದ್ರೆ ಮನೆಯಲ್ಲಿಯೇ ಈ ಕಪ್ಪು ತುಟಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಉಗುರು ಕಾಳಜಿ ಹೀಗೆ ಮಾಡಿ…!

ಅಡುಗೆ ಸೋಡಾ ಸ್ಕ್ರಬ್ : ಒಂದು ಚಮಚ ಅಡುಗೆ ಸೋಡಾಕ್ಕೆ ಒಂದು ಚಮಚ ಸಕ್ಕರೆ ಮತ್ತು ಸ್ವಲ್ಪ ತೈಲವನ್ನು ಮಿಕ್ಸ್ ಮಾಡಿ. ತುಟಿಗೆ ಈ ಮಿಶ್ರಣವನ್ನು ಹಚ್ಚಿ 10-15 ಸೆಕೆಂಡ್ ಬಿಡಿ. ನಂತ್ರ ತುಟಿಯನ್ನು ತೊಳೆದುಕೊಳ್ಳಿ.

ಸಕ್ಕರೆ ಹಾಗೂ ಜೇನುತುಪ್ಪದ ಸ್ಕ್ರಬ್ : ಒಂದು ಚಮಚ ಸಕ್ಕರೆಗೆ ನಾಲ್ಕೈದು ಹನಿ ಜೇನು ತುಪ್ಪವನ್ನು ಬೆರೆಸಿ 2 ಸೆಕೆಂಡ್ ಸ್ಕ್ರಬ್ ಮಾಡಿ. ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದ್ರ ನಂತ್ರ ಪೆಟ್ರೋಲಿಯಂ ಜೆಲ್ ಹಚ್ಚಿ.

ವೆನಿಲಾ ಸ್ಕ್ರಬ್ : ಎರಡು ಚಮಚ ಸಕ್ಕರೆಗೆ ಒಂದೆರಡು ಹನಿ ವೆನಿಲಾ ಎಸೆನ್ಸ್ ಹಾಗೂ ಆಲಿವ್ ಆಯಿಲನ್ನು ಮಿಕ್ಸ್ ಮಾಡಿ. ಇದನ್ನು 10 ಸೆಕೆಂಡುಗಳ ಕಾಲ ತುಟಿಗೆ ಸ್ಕ್ರಬ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...