alex Certify ಬೇಡದ ಕೂದಲು ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ಹೀಗೆ ನಿವಾರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಡದ ಕೂದಲು ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ಹೀಗೆ ನಿವಾರಿಸಿ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು ಸಮಾರಂಭಗಳಿಗೆ ಹೋಗಲು ಮುಜುಗರಪಡ್ತಾರೆ.

ಅನುವಂಶಿಕ ಅಥವಾ ಹಾರ್ಮೋನ್ ಏರುಪೇರಿನಿಂದ ಈ ಸಮಸ್ಯೆ ಎದುರಾಗುತ್ತದೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಪದೇ ಪದೇ ಕೂದಲನ್ನು ತೆಗೆಸುವುದು ಕಿರಿಕಿರಿಯುಂಟು ಮಾಡುವುದಲ್ಲದೇ, ಇದರಿಂದ ಸೌಂದರ್ಯ ಕುಂದಿದರೆ ಎಂಬ ಚಿಂತೆ ಕಾಡುತ್ತದೆ. ಇನ್ನು ಮುಂದೆ ಈ ಆಲೋಚನೆ ಬಿಡಿ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಕೂದಲು ಸಮಸ್ಯೆಗೆ ಅಂತ್ಯ ಹಾಡಿ.

ಕಿತ್ತಳೆ ಸಿಪ್ಪೆ ಮತ್ತು ಮೊಸರು

ಕಿತ್ತಳೆ ಸಿಪ್ಪೆ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ. ಕಿತ್ತಳೆ ಸಿಪ್ಪೆ ಪುಡಿ ಮಾಡಿ, ಮೊಸರು ಮತ್ತು ನಿಂಬೆ ರಸ ಕಲೆಸಿ, ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ. ಇದು ಮೊಡವೆ ಸಮಸ್ಯೆ ನಿವಾರಿಸಲು ಮತ್ತು ಮುಖದ ಮೇಲಿರುವ ಕೂದಲಿನ ಬಣ್ಣ ಬದಲಾಯಿಸುತ್ತದೆ.

ಪಪ್ಪಾಯಿ ಮತ್ತು ಅರಿಶಿನದ ಪೇಸ್ಟ್

ಪಪ್ಪಾಯ ನೈಸರ್ಗಿಕ ಬ್ಲೀಚ್. ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಪಪ್ಪಾಯ ಜೊತೆ ಅರಿಶಿನ ಬೆರೆಸಿ ಪೇಸ್ಟ್ ಮಾಡಿ ಪ್ರತಿದಿನ ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. 20 ನಿಮಿಷ ಬಿಟ್ಟು ಮುಖ ತೊಳೆಯಬೇಕು.

ನಿಂಬೆ ರಸ ಮತ್ತು ಜೇನುತುಪ್ಪ

ನಿಮ್ಮ ಮುಖದ ಕಾಂತಿ ಹೆಚ್ಚಿಸಿ, ಕೂದಲು ಸಮಸ್ಯೆಯಿಂದ ಹೊರಬರಲು ನಿಂಬೆ ಎಲ್ಲಕ್ಕಿಂತ ಉತ್ತಮ ಔಷಧ. ಪ್ರತಿದಿನ ನಿಂಬೆ ರಸ ಹಾಗೂ ಜೇನುತುಪ್ಪವನ್ನು ಬೆರೆಸಿ, ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ ಮುಖದ ಬಣ್ಣ ಬದಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...