alex Certify
ಕನ್ನಡ ದುನಿಯಾ       Mobile App
       

Kannada Duniya

33 ಸಾವಿರ ರೂ. ಬೆಲೆಯ ಸ್ವಿಮ್ ಸೂಟ್ ಇದ್ರೂ ಈಜಂಗಿಲ್ಲ!!

ಇಂದಿನ ಫ್ಯಾಷನ್ ಯುಗದಲ್ಲಿ ದಿನಕ್ಕೆ ಒಂದೊಂದು ಟ್ರೆಂಡ್ ಬರುತ್ತದೆ. ಆದರೆ ಗುಸ್ಸಿ ಸಂಸ್ಥೆ ಹೊರ ತಂದಿರುವ ಈ‌ ವಿನೂತನ ಬ್ಯ್ರಾಂಡ್ ಬಟ್ಟೆ ಬಗ್ಗೆ ಕೇಳಿದರೆ ವಿಚಿತ್ರ ಎನಿಸಬಹುದು.

ಗುಸ್ಸಿ ಫ್ಯಾಷನ್ ಸಂಸ್ಥೆ 33 ಸಾವಿರ ರೂ. ಮೌಲ್ಯದ ಸ್ವಿಮ್ ಸೂಟ್ ನ್ನು ಫ್ಯಾಷನ್ ಜಗತ್ತಿಗೆ ಪರಿಚಯಿಸಿದೆ. ಆದರೆ ಇದನ್ನು ಹಾಕಿಕೊಂಡು ಈಜಲು ಹೋಗುವಂತಿಲ್ಲ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ‌.

ಸಂಸ್ಥೆ ಈ ಬಗ್ಗೆ ಹೇಳಿಕೊಂಡಿದ್ದು, ಇದು ಸ್ವಿಮ್ ಸೂಟ್ ಆಗಿದ್ದರೂ ಶೇ.80 ರಷ್ಟು ಪಾಲಿಮೈಡ್ ಹಾಗೂ 20 ರಷ್ಟು ಎಲೆಸೈಟ್ ಇರುವುದರಿಂದ ನೀರಿನಲ್ಲಿ ಇಳಿಯಲು ಸಾಧ್ಯವಿಲ್ಲ. ಇದೊಂದು ಹೊಸ ಫ್ಯಾಷನ್ ಎಂದು ಹೇಳಿಕೊಂಡಿದೆ.

ಗುಸ್ಸಿ ಸಂಸ್ಥೆಯ ಈ ವಿಚಿತ್ರ ಬ್ರ್ಯಾಂಡ್ ಬಗ್ಗೆ‌ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಸ್ವೀಮ್‌ ಸೂಟ್ ನ್ನು ಈಜಲು ಬಳಸದೇ ಏನಕ್ಕೆ ಬಳಸಬೇಕು ಎನ್ನುವ ಮಾತುಗಳು ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...