alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಹಿಟ್ ಆಗಿದೆ ಕಸದ ಬುಟ್ಟಿ ಫ್ಯಾಷನ್

paris-fashion-a-f-vandevorst_364a574e-5fbe-11e7-8e9a-26934b659213

ಬೆಲ್ಜಿಯಂನ ದಂಪತಿ ಡಸ್ಟ್ ಬಿನ್ ಬ್ಯಾಗ್ ಗಳಲ್ಲೂ ಮಹಿಳೆಯರು ಸುಂದರವಾಗಿ ಕಾಣ್ತಾರೆ ಅನ್ನೋದನ್ನು ಸಾಬೀತು ಮಾಡಲು ಹೊರಟಿದ್ದಾರೆ. ಫಿಲಿಪ್ ಆರಿಕ್ಸ್ ಮತ್ತು ಆವ್ ವಂಡೇವೋರ್ಸ್ಟ್, ಡಸ್ಟ್ ಬಿನ್ ಕವರ್ ಹಾಗೂ ಡ್ರೈ ಕ್ಲೀನಿಂಗ್ ಶೀಟ್ ಗಳಲ್ಲಿ ಬಗೆಬಗೆಯ ಡ್ರೆಸ್ ಗಳನ್ನು ತಯಾರಿಸಿದ್ದಾರೆ.

paris-fashion-a-f-vandevorst_74c781ba-5fbc-11e7-8e9a-26934b659213

ಸ್ಕರ್ಟ್, ಬಾಲ್ ಗೌನ್ ಹೀಗೆ ವಿವಿಧ ವಿನ್ಯಾಸದ ಡ್ರೆಸ್ ಗಳನ್ನು ಪ್ಯಾರಿಸ್ ನಲ್ಲಿ ನಡೆದ ಶೋಗಾಗಿಯೇ ವಿನ್ಯಾಸಗೊಳಿಸಿದ್ದಾರೆ. ಹ್ಯಾಂಡ್ ಮೇಡ್ ಉಡುಪುಗಳಿಗೆ ಮಾತ್ರ ಈ ಪ್ರದರ್ಶನದಲ್ಲಿ ಅವಕಾಶವಿದ್ದು, ದಂಪತಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಡಸ್ಟ್ ಬಿನ್ ಬ್ಯಾಗ್ ನಿಂದ ಮಾಡಿದ ಡ್ರೆಸ್ ಜೊತೆಗೆ ಜಾಕೆಟ್ ಹಾಗೂ ಅದಕ್ಕೆ ಒಪ್ಪುವ ಶೂ ಧರಿಸಿ ಮಾಡೆಲ್ ಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಬಿನ್ ಕವರ್ ಗಳಿಂದ್ಲೇ ಲೆಗ್ಗಿಂಗ್ಸ್, ಜಾಕೆಟ್, ಟಾಪ್ ಎಲ್ಲವನ್ನೂ ವಿನ್ಯಾಸ ಮಾಡಿರೋದು ವಿಶೇಷ.

paris

ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದ ಹಾಲಿವುಡ್ ತಾರೆಯರು, ಪಾಪ್ ಸಿಂಗರ್ ಗಳು, ಫ್ಯಾಷನ್ ದುನಿಯಾದ ಸ್ಟಾರ್ಗಳೆಲ್ಲ ಈ ವಿನೂತನ ಪ್ರಯತ್ನ ನೋಡಿ ದಂಗಾಗಿದ್ದಾರೆ. ದಂಪತಿಯ ಹೊಸ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...