alex Certify
ಕನ್ನಡ ದುನಿಯಾ       Mobile App
       

Kannada Duniya

ಪರ್ಫ್ಯೂಮ್ ಪರಿಮಳ ದಿನವಿಡೀ ಇರಲು ಹೀಗೆ ಮಾಡಿ

p

ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ಬಗೆಬಗೆಯ ವೆರೈಟಿ ಸುಗಂಧ ದ್ರವ್ಯಗಳನ್ನು ಕೊಂಡುಕೊಳ್ತಾರೆ. 24 ಗಂಟೆ ಪರಿಮಳ ಸೂಸುವ ಪರ್ಫ್ಯೂಮ್ ಅನ್ನೇ ಹೆಚ್ಚಾಗಿ ಖರೀದಿ ಮಾಡ್ತಾರೆ. ಆದ್ರೆ ದಿನವಿಡೀ ಪರಿಮಳ ಘಮ್ಮೆನ್ನುತ್ತಿರಬೇಕು ಅಂದ್ರೆ ಅದಕ್ಕೊಂದು ಸಿಂಪಲ್ ಟ್ರಿಕ್ಸ್ ಇದೆ.

ನೀವು ಮೈಗೆ ಡಿ ಓಡರೆಂಟ್ ಪೂಸಿಕೊಳ್ಳುವ ವಿಧಾನವನ್ನು ಬದಲಾಯಿಸಬೇಕು. ಜೊತೆಗೆ ನಿಮಗೆ ವಾಸಲಿನ್ ಕೂಡ ಅತ್ಯವಶ್ಯ. ಕತ್ತು, ಕೈ, ಅಥವಾ ದೇಹದ ಯಾವ ಯಾವ ಭಾಗಗಳಿಗೆ ಡಿ ಓಡರೆಂಟ್ ಹಾಕಿಕೊಳ್ಳಲು ಬಯಸುತ್ತಿರೋ ಅಲ್ಲೆಲ್ಲಾ ನಿಧಾನವಾಗಿ ಸ್ವಲ್ಪ ಸ್ವಲ್ಪ ವಾಸಲಿನ್ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.

ಎಲ್ಲೆಲ್ಲಿ ವಾಸಲಿನ್ ಹಚ್ಚಿಕೊಂಡಿದ್ದಿರೋ ಅಲ್ಲಿ ಡಿ ಓಡರೆಂಟ್ ಹಾಕಿಕೊಳ್ಳಿ. ಹೀಗೆ ಮಾಡೋದ್ರಿಂದ ಪರಿಮಳದ ಘಮ ದಿನವಿಡೀ ಇರುತ್ತದೆ. ಯಾಕಂದ್ರೆ ವಾಸಲಿನ್ ಪರಿಮಳವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಮ್ಮ ಸ್ಕಿನ್ ಡ್ರೈ ಆಗಿದ್ದಲ್ಲಿ ಸುವಾಸನೆ ಹೆಚ್ಚು ಹೊತ್ತು ಇರುವುದಿಲ್ಲ, ಹಾಗಾಗಿ ನೀವು ವಾಸಲಿನ್ ಹಚ್ಚಿಕೊಂಡು ನಂತರ ಡಿ ಓಡರೆಂಟ್ ಹಾಕಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...