alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಷನ್ ಲೋಕದ ಹೊಸ ಟ್ರೆಂಡ್ ಯಾವುದು ಗೊತ್ತಾ…?

ಹೂವು ಚೆಲುವೆಲ್ಲಾ ನಂದೆಂದಿತು. ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಿತು ಅನ್ನೋ ಹಾಡು ನಿಮಗೆಲ್ಲಾ ನೆನಪಿರಬೇಕಲ್ವಾ. ಆದ್ರೆ ಮಾಡ್ರನ್ ಪ್ರಪಂಚದ ಫ್ಯಾಷನ್ ಟ್ರೆಂಡ್ ನಲ್ಲಿ ಹೆಣ್ಣು, ಹೂವು ದೂರ ದೂರ. ಭಾರತದಲ್ಲಿ ಕೂಡ ಸಾಂಪ್ರದಾಯಿಕ ಕಾರ್ಯಕ್ರಮಗಳ ಹೊರತಾಗಿ ಫ್ಯಾಷನ್ ಷೋ ನಲ್ಲಿ ಹೆಣ್ಣಿನ ಕೇಶರಾಶಿಯ ಅಕ್ಕಪಕ್ಕದಲ್ಲೆಲ್ಲೂ ಹೂವು ಸುಳಿದಾಡೋದಿಲ್ಲ.

ಆದ್ರೆ ಅಮೆರಿಕದ ಪಾಪ್ ಸಿಂಗರ್ ಬೆಯಾನ್ಸ್ ಮತ್ತು ರಿಹಾನಾ ಅವರ ವೋಗ್ ಕವರ್ ಪೇಜ್ ಶೂಟ್ನಿಂದ ಪ್ರಭಾವಿತಳಾದ ಯುವತಿಯೊಬ್ಬಳು ಹೂವಿನ ಹೂಜಿ ಆಕಾರದ ಹೇರ್ ಸ್ಟೈಲ್ ಕಂಡುಹಿಡಿದಿದ್ದಾಳೆ. ಹಾಂಗ್ ಕಾಂಗ್ ಮೂಲದ ಯುವತಿಯಾದ ಟೇಲರ್ ತನ್ನ ಕೇಶರಾಶಿಯನ್ನೇ ಫ್ಲವರ್ ವಾಜ್ ಆಗಿ ಮಾಡಿಕೊಂಡಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಟ್ವಿಟ್ಟರ್ ನಲ್ಲಿ ಕೂಡ ಆಕೆಯ ಹೇರ್ ಸ್ಟೈಲ್ ನೋಡಿದವರು ಅಚ್ಚರಿಗೊಳಗಾಗೋದ್ರ ಜೊತೆಗೆ ಆಕೆಯ ಪ್ರಯತ್ನಕ್ಕೆ ಜೈ ಅಂತಿದ್ದಾರೆ. ಫ್ಲವರ್ ವಾಜ್ ರೀತಿಯಲ್ಲಿ ಕೂದಲು ಕಟ್ಟಿಕೊಂಡು ಕೂದಲ ತುದಿಯಲ್ಲಿ ಹೂವುಗಳ ಗೊಂಚಲುಗಳನ್ನಿಟ್ಟು ಕಟ್ಟಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಹುಟ್ಟುಹಾಕಿದೆ. ಆಕೆಯ ಹೇರ್ ಸ್ಟೈಲ್ ನ್ನೇ ಅನೇಕರು ಅನುಕರಿಸಿ ಅದರ ಫೋಟೋ ಮತ್ತು ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...