alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸಿಗೆ ಬರ್ತಿದ್ದಂತೆ ಫ್ಯಾಷನ್ ಕೂಡ ಬದಲಾಗಿದೆ

summer

ಫ್ಯಾಷನ್ ಜಗತ್ತೇ ಹಾಗೆ, ಕಾಲಕ್ಕೆ ತಕ್ಕಂತೆ ಟ್ರೆಂಡ್ ಕೂಡ ಬದಲಾಗುತ್ತಲೇ ಇರುತ್ತೆ. ಈಗ ಬೇಸಿಗೆಗಾಗಿಯೇ ಹೊಸ ಹೊಸ ಸ್ಟೈಲ್ ಗಳು ಬಂದಿವೆ. ಹಾಗಿದ್ರೆ ಈ ಬಾರಿ ಸಮ್ಮರ್ ಗಾಗಿ ನಿಮ್ಮ ವಾರ್ಡ್ ರೋಬ್ ನಲ್ಲಿ ಏನೆಲ್ಲಾ ಇರ್ಬೇಕು ಅನ್ನೋದನ್ನು ನೋಡೋಣ.

seaside-stripes

ಸೀ ಸೈಡ್ ಸ್ಟ್ರೈಪ್ಸ್….

ಈಗ ಸ್ಟ್ರೈಪ್ಸ್ ಫ್ಯಾಷನ್ ಇಲ್ಲ, ತಗೊಂಡಿರೋದೆಲ್ಲ ವೇಸ್ಟ್ ಅಂತಾ ಅಂದುಕೊಳ್ಳಲೇಬೇಡಿ. ಬೇಸಿಗೆಯಲ್ಲಿ ಸ್ಟ್ರೈಪ್ಸ್ ಡ್ರೆಸ್ ಗಳ ಲುಕ್ ಸಖತ್ತಾಗಿ ಕಾಣ್ಸತ್ತೆ. ಅದರಲ್ಲೂ ಸಮುದ್ರ ಕಿನಾರೆಯಲ್ಲಿ ಸ್ಟ್ರೈಪ್ಸ್ ಡ್ರೆಸ್ ತೊಟ್ಟು, ಕೈಯ್ಯಲ್ಲೊಂದು ಛತ್ರಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಹೊರಟರೆ ನಿಮ್ ಲುಕ್ ಎಲ್ರಿಗೂ ಕಿಕ್ ಕೊಡೋದ್ರಲ್ಲಿ ಡೌಟೇ ಇಲ್ಲ.

handbag

ದೊಡ್ಡ ಹ್ಯಾಂಡ್ ಬ್ಯಾಗ್….

ಈಗ ದೊಡ್ಡ ದೊಡ್ಡ ಹ್ಯಾಂಡ್ ಬ್ಯಾಗ್ ಕೊಂಡೊಯ್ಯೋದೇ ಒಂದು ಫ್ಯಾಷನ್. ಎಲ್ಲಾ ಕಡೆ ಈಗ ಯುವತಿಯರು ದೊಡ್ಡ ಹ್ಯಾಂಡ್ ಬ್ಯಾಗ್ ಕೊಂಡೊಯ್ಯೋದು ಹೊಸ ಟ್ರೆಂಡ್ ಆಗ್ಬಿಟ್ಟಿದೆ. ಕೇವಲ ನಿಮ್ಮ ಮೇಕಪ್ ಸಾಮಗ್ರಿ ಮಾತ್ರವಲ್ಲ ಎಲ್ಲವನ್ನೂ ಅದರಲ್ಲಿ ತೆಗೆದುಕೊಂಡು ಹೋಗಬಹುದು.

yellow

ಹಳದಿ ಡ್ರೆಸ್….

ಬೇಸಿಗೆಯಲ್ಲೂ ಒಳ್ಳೆ ಬ್ರೈಟ್ ಕಲರ್ ಗಳನ್ನೇ ಹಾಕಬೇಕು ಅನ್ನೋ ಆಸೆ ಎಷ್ಟೋ ಜನರಿಗೆ ಇರುತ್ತೆ. ಸ್ಟ್ರೈಪ್ಸ್, ಸೊಲಿಡ್ಸ್ ಅಥವಾ ರಫಲ್ಸ್ ಯಾವುದಾದ್ರೂ ಹಳದಿ ಬಣ್ಣ ಬೇಸಿಗೆಗೆ ಹೇಳಿ ಮಾಡಿಸಿದಂತಿರುತ್ತದೆ. ನೀವು ಬೆಳ್ಳಗಿರಲಿ, ಕಪ್ಪಗಿರಲಿ ಅಥವಾ ಯಾವುದೇ ಬಣ್ಣವಿದ್ರೂ ಅದು ನಿಮಗೆ ಒಪ್ಪುತ್ತದೆ.

slit-sleveಸ್ಲಿಟ್ ಸ್ಲೀವ್ಸ್….

ಸ್ಲಿಟ್ ಸ್ಲೀವ್ಸ್ ಈ ವರ್ಷ ಸಮ್ಮರ್ ನ ಹೊಸ ಟ್ರೆಂಡ್ ಗಳಲ್ಲೊಂದು. ಡೆನಿಮ್ ಜಾಕೆಟ್, ಡ್ರೆಸ್, ಮ್ಯಾಕ್ಸಿ ಡ್ರೆಸ್ ಗಳಲ್ಲೂ ಈಗ ಇದೇ ಫ್ಯಾಷನ್ ಬರ್ತಾ ಇದೆ. ಸ್ಲಿಟ್ ಸ್ಲೀವ್ಸ್ ಡ್ರೆಸ್ ಹಾಕಿಕೊಂಡಾಗ ಅದರ ಜೊತೆಗೆ ಒಂದಷ್ಟು ಫ್ಯಾಷನೇಬಲ್ ಬಳೆಗಳು, ಬ್ರೆಸ್ ಲೆಟ್ ಧರಿಸಿದ್ರೆ ಚೆನ್ನಾಗಿ ಮ್ಯಾಚ್ ಆಗುತ್ತದೆ.

flat

ಫ್ಲಾಟ್ ಫಾರ್ಮ್ಸ್….

ಹುಡುಗಿಯರಿಗೆ ಹೈಹೀಲ್ಸ್ ಅಂದ್ರೆ ಅಚ್ಚುಮೆಚ್ಚು. ಆದ್ರೆ ಈಗ ಅತ್ಯಂತ ಆರಾಮಾದಾಯಕವಾದ ಹೀಲ್ಸ್ ಬಂದಿದೆ. ಅದೇ ಫ್ಲಾಟ್ ಫಾರ್ಮ್ಸ್. ಸಖತ್ ಕ್ಲಾಸಿ ಲುಕ್ ಜೊತೆಗೆ ಕ್ಯೂಟ್ ಆಗಿಯೂ ಕಾಣಿಸುತ್ತೆ. ಬೇಸಿಗೆಗಂತೂ ಇದು ಹೇಳಿ ಮಾಡಿಸಿದ ಸ್ಟೈಲ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...