alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಂಗಲ್ಯಕ್ಕೂ ಫ್ಯಾಷನ್ ಟ್ರೆಂಡ್

ಮಹಿಳೆಯರು ಆಭರಣ ಪ್ರಿಯರು. ಮದುವೆ, ಹಬ್ಬ- ಹರಿದಿನಗಳಲ್ಲಿ ಸರ್ವಾಲಂಕಾರ ಭೂಷಿತರಾಗಿ ಕಂಗೊಳಿಸುತ್ತಾರೆ. ಅಲಂಕಾರಕ್ಕಾಗಿ ಬೇರೆ ಬೇರೆ ಆಭರಣಗಳನ್ನು ಧರಿಸಿದರೂ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಹೆಣ್ಣಿಗೆ ಮಾಂಗಲ್ಯವೇ ಭೂಷಣ. ಮಾಂಗಲ್ಯವಿಲ್ಲದ ಅವಳ ಅಲಂಕಾರ ಅಪೂರ್ಣ.

ಮೊದಲೆಲ್ಲಾ ಬರೀ ಕರಿಮಣಿಗಳನ್ನು ದಾರದಲ್ಲಿ ಪೋಣಿಸಿ ಮಧ್ಯದಲ್ಲಿ 2 ತಾಳಿ ಬೊಟ್ಟುಗಳಿರುವ ಸರ ಧರಿಸುತ್ತಿದ್ದರು. ಕಾಲ ಕ್ರಮೇಣ ಮಹಿಳೆಯರ ಅಭಿರುಚಿಗೆ ತಕ್ಕಂತೆ ಮಾಂಗಲ್ಯ ಸರಗಳಲ್ಲಿಯೂ ಸಾಕಷ್ಟು ಬದಲಾವಣೆಯಾಗಿವೆ. ಕರಿಮಣಿ ನಡುವೆ ಬಂಗಾರದ ಗುಂಡು ಪೋಣಿಸಿ ಮಾಂಗಲ್ಯ, ನಂತರ ಬರೀ ಬಂಗಾರದ ಚೈನ್ ಮಧ್ಯೆ ಒಂದೊಂದು ಕರಿಮಣಿ, ಕರಿಮಣಿ ಸರಗಳ ಮಧ್ಯೆ ಬಂಗಾರದ ಚೈನ್ ಹೀಗೆ ಬಗೆ ಬಗೆಯ ವಿನ್ಯಾಸದ ಮಾಂಗಲ್ಯ ಸರಗಳು ಮಹಿಳೆಯರ ಗಮನ ಸೆಳೆದಿದ್ದವು.

ಆಧುನಿಕ ಭಾರತೀಯ ನಾರಿಯರ ಗಮನ ಸೆಳೆಯುವ ಗಿಡ್ಡದಾಗಿರುವ ನೆಕ್ ಲೆಸ್ ಮಾದರಿಯ ಮಾಂಗಲ್ಯ ಸರಗಳು ಇಂದಿನ ಟ್ರೆಂಡ್. ಉದ್ದನೆಯ ಮಾಂಗಲ್ಯವನ್ನು ಸದಾ ಹಾಕಲು ಇಚ್ಛಿಸದ ಮಹಿಳೆಯರು ಸಾಂಪ್ರದಾಯಿಕ ಉಡುಗೆಗೂ, ಆಧುನಿಕ ಉಡುಗೆಗೂ ಸೈ ಎನ್ನುವ ನವೀನ ಮಾದರಿಯ ಚಿಕ್ಕದಾದ ಸ್ಟೈಲಿಶ್ ಮಾಂಗಲ್ಯಗಳಿಗೆ ಮಾರು ಹೋಗುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...