alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸಿಗೆಯಲ್ಲಿ ಫ್ಯಾಷನ್ ಜೊತೆಗೆ ಲುಕ್ ಹೀಗಿರಲಿ

how-to-wear-palazzo-pants

ಬೇಸಿಗೆಯಲ್ಲಿ ಫ್ಯಾಷನೇಬಲ್ ಆಗಿ ಕಾಣಿಸಿಕೊಳ್ಳೋದು ಸುಲಭ. ಯಾಕಂದ್ರೆ ನಿಮಗೆ ಚಾಯ್ಸ್ ಕೂಡ ಬೇಕಾದಷ್ಟಿರುತ್ತದೆ. ಆದ್ರೆ ಫ್ಯಾಷನ್ ಜೊತೆಗೆ ನೀವು ಧರಿಸುವ ಉಡುಪು ಕಂಫರ್ಟೇಬಲ್ ಆಗಿರಲಿ. ಇದನ್ನು ಶಾಪಿಂಗ್ ಸಮಯದಲ್ಲಿ ಮರೆಯಬೇಡಿ. ಹಾಗಿದ್ದಲ್ಲಿ ಮಾತ್ರ ಬಿರುಬಿಸಿಲಲ್ಲೂ ನೀವು ರಿಲ್ಯಾಕ್ಸ್ ಮೂಡಿನಲ್ಲಿರುತ್ತೀರಾ.

ಬೇಸಿಗೆಯಲ್ಲಿ ತಿಳಿಬಣ್ಣಗಳು ಮಾತ್ರ ಸೂಕ್ತ ಅಂದ್ಕೊಳ್ಳೋದು ತಪ್ಪು. ಶೈನಿಂಗ್ ಹಾಗೂ ಗಾಢ ಬಣ್ಣದ ಉಡುಪುಗಳು ಕೂಡ ಸೂಟ್ ಆಗುತ್ತವೆ. ಅದ್ರಲ್ಲಿ ನೀವು ಸಖತ್ ಸ್ಟೈಲಿಶ್ ಆಗಿ ಕಾಣಬಹುದು. ಒಂದೇ ಕಲರ್ ನ ಪ್ರಿಂಟ್ ಇರುವ ಟಾಪ್, ಪ್ಯಾಂಟ್ ಅಥವಾ ಸ್ಕರ್ಟ್ ಧರಿಸಬಹುದು.

ದುಪ್ಪಟ್ಟಾ ಮತ್ತು ಸ್ಕಾರ್ಫ್ ಮೂಲಕ ಸೋಬರ್ ಲುಕ್ ಕೊಡಬಹುದು. ತಿಳಿ ಬಣ್ಣದ ಡ್ರೆಸ್ ಜೊತೆಗೆ ಡಿಫರೆಂಟ್ ಕಲರ್ ನ ಸ್ಕಾರ್ಫ್ ಚೆನ್ನಾಗಿ ಹೊಂದುತ್ತದೆ. ನ್ಯಾಚುರಲ್ ಫ್ಯಾಬ್ರಿಕ್ ನಿಂದ ಮಾಡಿದ ತಿಳಿಯಾದ ಲೇಯರ್ ಇರುವ ಉಡುಪು ಸುಡು ಬೇಸಿಗೆಯಲ್ಲಿ ಧರಿಸಲು ಸೂಕ್ತವಾಗಿರುತ್ತದೆ.

ಪಲಾಜೋ ಪ್ಯಾಂಟ್ ಜೊತೆಗೆ ಅಸ್ಮೆಟ್ರಿಕಲ್ ಜಾಕೆಟ್ ಹಾಕಿದ್ರೆ ಸ್ಮಾರ್ಟ್ ಆಗಿ ಕಾಣ್ತೀರಾ. ಕ್ಯಾಶುವಲ್ ಲುಕ್ ಗಾಗಿ ನೀವು ಕುರ್ತಾ ಹಾಗೂ ಸ್ಲಿಪ್ ಫಿಟ್ ಪ್ಯಾಂಟ್ ಹಾಕಿಕೊಳ್ಳಿ. ಶಾರ್ಟ್ ಕುರ್ತಾ ಜೊತೆಗೆ ಹೂವಿನ ಪ್ರಿಂಟ್ ಇರುವ ಪಲಾಜೋ ಚೆನ್ನಾಗಿ ಕಾಣುತ್ತದೆ.

ಜೀನ್ಸ್ ಮೇಲೂ ಉದ್ದನೆಯ ಸ್ಟ್ರೇಟ್ ಕುರ್ತಾ ಅಥವಾ ಶಾರ್ಟ್ ಕುರ್ತಾ ಹಾಕಬಹುದು. ಸ್ಟ್ರೈಪ್ ಲೆಸ್ ಟಾಪ್ ಈಗಿನ ಲೇಟೆಸ್ಟ್ ಟ್ರೆಂಡ್. ಬೇಸಿಗೆಗೆ ಕೂಡ ಇದು ಬೆಸ್ಟ್ ಲುಕ್. ಸಖತ್ ಫ್ಯಾಷನೇಬಲ್ ಆಗಿ ಕಾಣಿಸುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...