alex Certify ಬಲು ಸುಂದರ ಸಾಗರದಲ್ಲಿ ತೇಲುವ ಈ ವಿಲ್ಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲು ಸುಂದರ ಸಾಗರದಲ್ಲಿ ತೇಲುವ ಈ ವಿಲ್ಲಾ

ದುಡ್ಡು ಇದ್ರೆ ಮನೆಯನ್ನು ಸುಂದರವಾಗಿ ಕಟ್ಟಿಸಬಹುದು ಎಂಬುದು ಸುಳ್ಳು. ದುಡ್ಡಿದ್ದರೂ ಅಭಿರುಚಿ ಇಲ್ಲದ ಮಂದಿಯೂ ಇದ್ದಾರೆ.

ಹೀಗಿರುವಾಗ ನೀರಿನಲ್ಲಿ ತೇಲುವ ಮನೆಗಳನ್ನು ಕಟ್ಟಿಸಿದರೆ ಹೇಗಿರುತ್ತೆ. ಹೌದು, ಅವು ಸಾಗರದಲ್ಲಿ ತೇಲುವ ವಿಲ್ಲಾಗಳು. ದುಬೈ ಎಂದರೆ ನೆನಪಾಗುವುದೇ ಐಷಾರಾಮಿ ಜೀವನ. ಈ ನಗರ ಸದಾ ಜಗಮಗಿಸುತ್ತದೆ. ಫ್ಲೋಟಿಂಗ್ ಸೀಹಾರ್ಸ್ ಎಂದು ಕರೆಯಲ್ಪಡುವ ಈ ಸುಂದರ ವಿಲ್ಲಾಗಳು ಅಷ್ಟು ಐಷಾರಾಮಿ ಹಾಗೂ ಸುಂದರ.

ಇದರ ಬೆಲೆ ಕೋಟಿಗಟ್ಟಲೆ. ಇದು ಒಂದು ತರಹದ ಅಡ್ವೆಂಚರ್. ಈ ವಿಲ್ಲಾದಲ್ಲಿದ್ದರೆ ಸಾಗರದ ಆಳದ ಜಲಚರಗಳನ್ನು ಹತ್ತಿರದಿಂದ ನೋಡಬಹುದು. ಸಾಗರ ಆಳದಲ್ಲಿರುತ್ತದೆ ಬೆಡ್ ರೂಮ್. ಈ ಫ್ಲೋಟಿಂಗ್ ಸೀಹಾರ್ಸ್ ವಿಲ್ಲಾಗಳು ದುಬೈನಲ್ಲಿ ಸುದ್ದಿ ಮಾಡ್ತಿವೆ. ಐಷಾರಾಮಿ ನಗರ ದುಬೈನಲ್ಲಿ ನಿರ್ಮಾಣವಾಗಿರುವ ಈ ವಿಲ್ಲಾಗಳು 4000 ಚದರ ಅಡಿ ವಿಸ್ತೀರ್ಣವಿದ್ದು ಹೀಟರ್, ಮಿರರ್, ಬಾತ್ ಟಬ್, ಬಾತ್ ರೂಮ್, ಗೆಸ್ಟ್ ರೂಮ್ ಕೂಡ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...