alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿರ ಹೂಗಳಿಂದ ತಯಾರಾಗುತ್ತೆ ಈ ಸುಗಂಧ ದ್ರವ್ಯ

ಚಾನೆಲ್ ನಂ. 5 ಮಹಿಳೆಯರಿಗೆ ಹೇಳಿ ಮಾಡಿಸಿದಂತಹ ಸುಗಂಧ ದ್ರವ್ಯ. ಈ ಸೆಂಟ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. 30 ಮಿಲಿ ತೂಕದ ಒಂದು ಬಾಟಲಿ ಪರ್ಫ್ಯೂಮ್ ತಯಾರಿಸಲು 1000ಕ್ಕೂ ಹೆಚ್ಚು ಹೂವುಗಳು ಬೇಕು.

1000 ಪೆಗೊಮಾಸ್ ಮಲ್ಲಿಗೆ ಹೂವುಗಳು ಹಾಗೂ 12 ಪೆಗೊಮಾಸ್ ಗುಲಾಬಿ ಹೂಗಳನ್ನು ಬಳಸಿ 30 ಮಿಲಿ ಸುಗಂಧ ದ್ರವ್ಯ ತಯಾರಿಸಲಾಗುತ್ತದೆ. ಗುಣಮಟ್ಟಕ್ಕೆ ತಕ್ಕಂತೆ ಈ ಪರ್ಫ್ಯೂಮ್ ದುಬಾರಿ ಕೂಡ.

ಫ್ರೆಂಚ್ ಫ್ಯಾಷನ್ ಹೌಸ್ ನಲ್ಲಿ ಚಾನೆಲ್ ಕಂಪನಿಯ 50 ಮಿಲಿ ಸೆಂಟಿನ ಬಾಟಲಿಗೆ 7000 ರೂಪಾಯಿ ಇದೆ. ಇದು ಆರಂಭಿಕ ಬೆಲೆ. ಪೆಗೊಮಾಸ್ ಹಾಗೂ ಫ್ರಾನ್ಸ್ ನಲ್ಲಿ ಈ ಸುಗಂಧ ದ್ರವ್ಯ ತಯಾರಿಸಲೆಂದೇ ವಿಶೇಷವಾಗಿ ಹೂವುಗಳನ್ನು ಬೆಳೆಯಲಾಗುತ್ತಿದೆ. 50 ಎಕರೆ ತೋಟದಲ್ಲಿ ಮಲ್ಲಿಗೆ ಮತ್ತು ಗುಲಾಬಿ ಹೂವುಗಳನ್ನು ಬೆಳೆದು, ಅವುಗಳಿಂದ ಸೆಂಟ್ ತಯಾರಿಸಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...