alex Certify SPECIAL: ʼಮುತ್ತುʼ ನೀಡುವ ಮೊದಲು ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SPECIAL: ʼಮುತ್ತುʼ ನೀಡುವ ಮೊದಲು ನಿಮಗಿದು ತಿಳಿದಿರಲಿ

ಇಂದು ಅಂತರಾಷ್ಟ್ರೀಯ ಕಿಸ್ಸಿಂಗ್‌ ಡೇ. ಪ್ರತಿ ವರ್ಷ ಜುಲೈ 6 ರಂದು ಮುತ್ತಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ನಿಮಿತ್ತ ವಿಶೇಷ ಲೇಖನ.

ಜೀವನದಲ್ಲಿ ಒಮ್ಮೆಯಾದ್ರೂ ನಿಮ್ಮ ಪ್ರೀತಿ ಪಾತ್ರರಿಗೆ ಮುತ್ತು ಕೊಟ್ಟಿರುತ್ತೀರಿ. ಅಮ್ಮನಿರಲಿ, ಅಕ್ಕನಿರಲಿ, ತಮ್ಮನಿರಲಿ ಇಲ್ಲ ಕುಟುಂಬದ ಸದಸ್ಯರೊಬ್ಬರಿಗೆ ಮುತ್ತು ಕೊಟ್ಟಿರುತ್ತೀರಾ. ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನವಿದು.

ಪ್ರೇಮಿಗಳು ಮುತ್ತಿಗೆ ವಿಶೇಷ ಸ್ಥಾನ ನೀಡ್ತಾರೆ. ಮತ್ತು ಬರಿಸುವ ಮುತ್ತು ನೀಡಿದ್ರೆ ಮಾತ್ರ ಸಂಬಂಧ ಗಟ್ಟಿಯಾಗೋದು ಎಂಬ ನಂಬಿಕೆ ಈಗಿನ ಯುವ ಪ್ರೇಮಿಗಳಿಗಿದೆ. ಮುತ್ತು ಕೊಡುವ ಮುನ್ನ ಕೆಲವೊಂದು ವಿಷಯಗಳನ್ನು ಅವಶ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ.

ಕೊಡುವ ಮುತ್ತಿಗೂ ಬಾಯಿಯ ವಾಸನೆಗೂ ಬಹಳ ಹತ್ತಿರದ ನಂಟಿದೆ. ಬಾಯಿಯಿಂದ ದುರ್ನಾತ ಬರ್ತಾ ಇದ್ದಲ್ಲಿ ಅದು ಸಂಗಾತಿಯನ್ನು ಸೆಳೆಯುವ ಬದಲು ದೂರ ಓಡುವಂತೆ ಮಾಡುತ್ತದೆ. ಹಾಗಾಗಿ ಕಿಸ್ ಕೊಡುವ ಮುನ್ನ ಉಸಿರಿನ ವಾಸನೆ ಬಗ್ಗೆ ಗಮನವಿರಲಿ.

ಮುತ್ತು ಕೊಡುವ ಮುನ್ನ ಲಿಪ್‌ ಸ್ಟಿಕ್ ಬಗ್ಗೆಯೂ ಗಮನವಿರಲಿ. ತುಂಬಾ ಲಿಪ್‌ ಸ್ಟಿಕ್ ಹಚ್ಚಿಕೊಂಡು ಮುತ್ತು ಕೊಟ್ಟಲ್ಲಿ ಅದು ಸಂಗಾತಿ ಮುಖದ ಮೇಲೆ ಅಸಹ್ಯವಾಗಿ ಕಾಣುತ್ತದೆ.

ಕೆಲವರು ಕಿಸ್ ಮಾಡುವ ಮೊದಲು ಧೂಮಪಾನ ಮಾಡ್ತಾರೆ. ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ.

ಒಡೆದ ತುಟಿಯಲ್ಲಿ ಸಂಗಾತಿಗೆ ಕಿಸ್ ಮಾಡಬೇಡಿ. ಸಂಗಾತಿ ತುಟಿಗೆ ಇದ್ರಿಂದ ನೋವಾಗಬಹುದು. ಜೊತೆಗೆ ಸಂಗಾತಿ ಕಿರಿಕಿರಿ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಕೆಲವರು ಶೇವ್ ಮಾಡದೆ ಸಂಗಾತಿ ಬಳಿ ಹೋಗ್ತಾರೆ. ನಿಮ್ಮ ಗಡ್ಡ ಸಂಗಾತಿಗೆ ಕಿರಿಕಿರಿಯುಂಟು ಮಾಡುತ್ತದೆ. ಹಾಗಾಗಿ ಮುತ್ತು ಕೊಡುವ ಮೊದಲು ಇಲ್ಲ ತೆಗೆದುಕೊಳ್ಳುವ ಮೊದಲು ಶೇವ್ ಮಾಡೋದನ್ನು ಮರೆಯಬೇಡಿ.

ಮುತ್ತು ಕೊಡುವ ಮೊದಲು ನೀವು ಎಲ್ಲಿದ್ದೀರಿ ಎಂಬುದು ನೆನಪಿರಲಿ. ನಿಮ್ಮ ಸಂಗಾತಿಯನ್ನು ನೀವು ಅತಿಯಾಗಿ ಪ್ರೀತಿಸುತ್ತೀರಿ ನಿಜ. ಹಾಗಂತ ಸಾರ್ವಜನಿಕ ಸ್ಥಳಗಳಲ್ಲಿ ಕಿಸ್ ಕೊಡುವುದು ಸೂಕ್ತವಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...