alex Certify
ಕನ್ನಡ ದುನಿಯಾ       Mobile App
       

Kannada Duniya

ದಸರೆಯ ರಂಗು ಹೆಚ್ಚಿಸುವ ಎತ್ನಿಕ್‌ ಔಟ್‌ ಫಿಟ್ಸ್‌

ಕರ್ನಾಟಕದಲ್ಲಿ ಆಚರಿಸಲ್ಪಡುವ ಅದ್ಧೂರಿ ಹಬ್ಬಗಳಲ್ಲಿ ನವರಾತ್ರಿ ಹಬ್ಬವೂ ಒಂದು.  ಇಂದಿನ ಮಾಡರ್ನ್‌ ಅಂದಗಾತಿಯರು ದಸರಾ ಹಬ್ಬಕ್ಕಾಗಿ ಸುಂದರವಾಗಿ ಸಿದ್ಧಗೊಳ್ಳೋಕೆ ಈಗಾಗಲೇ ತಯಾರಿ ಶುರುಮಾಡಿಯಾಗಿದೆ. ಲಲನೆಯರ ಹಬ್ಬದ ಸಡಗರಕ್ಕೆ ಇನ್ನಷ್ಟು ಮೆರಗು ತರುವ, ದಸರಾ ಹಬ್ಬದ ರಂಗು ಹೆಚ್ಚಿಸುವ ಇಂದಿನ ಮಾಡರ್ನ್‌ ಎತ್ನಿಕ್‌ ದಿರಿಸುಗಳ ಬಗ್ಗೆ ಒಂದು ಚಿಕ್ಕ ಟಿಪ್ಪಣಿ ನೀಡಿದ್ದೇವೆ ನೋಡಿ….

ಎತ್ನಿಕ್ಗೌನ್ಸ್

ಎತ್ನಿಕ್‌ ಗೌನ್‌ ಈ ವರ್ಷ ಅತೀ ಜನಪ್ರಿಯತೆ ಪಡೆದಿರುವ ಒಂದು ಹೊಸ ಪರಿಕಲ್ಪನೆ. ಇತ್ತೀಚೆಗಂತೂ ಈ ಎತ್ನಿಕ್ ಗೌನ್‌ ದಿರಿಸಿನಲ್ಲಿ ಹಲವು ವಿನ್ಯಾಸಗಳು ಪರಿಚಿತಗೊಳ್ಳುತ್ತಿವೆ. ಫ್ಯಾಷನ್ ವಿನ್ಯಾಸಕರೂ ಕೂಡ ಈ ಎತ್ನಿಕ್‌ ಗೌನ್‌ಗಳ ಪ್ರಚಾರದ ಕುರಿತು ಗಮನ ವಹಿಸುತ್ತಿದ್ದು, ಇಂಥ ಗೌನ್ ಟ್ರೆಂಡ್‌ ಗಳನ್ನ ಕೇಪ್ ಶೈಲಿಯೊಂದಿಗೆ ವಿಲೀನಗೊಳಿಸಿ ಡಿಸೈನ್‌ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಂದಚೆಂದದ ಎತ್ನಿಕ್‌ ಗೌನ್ಸ್‌ಗಳನ್ನ ಧರಿಸಿ ಹಬ್ಬವನ್ನ ಆಚರಿಸಿ.

ಸಾರಿ ಟ್ರೆಂಡ್ಸ್

ನಮ್ಮ ಭಾರತದಲ್ಲಿ ಸೀರೆಗಳು ಎಂದೆಂದಿಗೂ ಎವರ್‌ಗ್ರೀನ್‌ ಟ್ರೆಂಡ್‌. ಆದರೆ ಸೀರೆಯಲ್ಲಿ ಇಂದಿನ ಟ್ರೆಂಡ್‌ ನೋಡುವುದಾದರೆ ಮಲ್ಟಿಕಲರ್‌ ಪಲ್ಲು ಹೊಂದಿರುವ ಪ್ಲೇನ್‌ ಸಾರಿ ಮತ್ತು ಮಲ್ಟಿಕಲರ್‌ ಡಿಸೈನರ್‌ ಬ್ಲೌಸ್‌. ಸೀರೆಯಲ್ಲಿಯೂ ಮಾಡರ್ನ್‌ ಆಗಿ ಕಾಣುವುದಕ್ಕಾಗಿ ಇಂದಿನ ಹೊಸ ಟ್ರೆಂಡ್‌ ಆಗಿರುವ ಡಿಸೈನರ್‌ ಬ್ಲೌಸ್‌ ಗಳನ್ನ ಧರಿಸಬಹುದು. ಇತ್ತೀಚೆಗೆ, ದೇಹದ ಆಕಾರಕ್ಕೆ ಸರಿಯಾಗಿ ಹೊಂದಿಕೊಳ್ಳುವ ಜಾರ್ಜ್ಟೇಟ್ ಫ್ಯಾಬ್ರಿಕ್ ಸಾರಿ ವ್ಯಾಪಕ ಪ್ರಚಾರ ಪಡೆಯುತ್ತಿದ್ದು, ಅಂದಗಾತಿಯರ ಮನಗೆಲ್ಲುತ್ತಿದೆ. ಸೋ ನೀವೂ ಕೂಡ ಇಂಥ ಟ್ರೆಂಡಿ ಸಾರಿಗಳನ್ನ ಟ್ರೈ ಮಾಡಬಹುದು.

ಸಲ್ವಾರ್ಸೂಟ್ಸ್

ಸಲ್ವಾರ್ ಸೂಟ್ಸ್‌ ಕೂಡ ಭಾರತೀಯ ನಾರಿಯರ ನೆಚ್ಚಿನ ಡ್ರೆಸ್‌. ಎಂದೆಂದಿಗೂ ಈ ಉಡುಪು ತನ್ನ ಬೇಡಿಕೆಯನ್ನ ಕಳೆದುಕೊಂಡಿಲ್ಲ. ಸಲ್ವಾರ್ ಸೂಟ್ಸ್‌ನಲ್ಲಿಯೇ ಅದೆಷ್ಟೋ ವಿನ್ಯಾಸಗಳು ಬಂದು ಹೋಗಿವೆ. ಕಳೆದ ಕೆಲವು ವರ್ಷಗಳಿಂದ  ಅನಾರ್ಕಲಿ ಡ್ರೆಸ್‌ ಅಂದಗಾತಿಯರ ಮನಗೆದ್ದಿತ್ತು. ಆದರೆ ಇಂದೂ ಕೂಡ ಈ ಅನಾರ್ಕಲಿ ಶೈಲಿಯ ಉಡುಪಿನ ವಿನ್ಯಾಸದಲ್ಲಿಯ ಬದಲಾವಣೆ ಚಾಲ್ತಿಯಲ್ಲಿದೆ. ಈಗಲೂ ಕೂಡ ನಾವು ಅನಾರ್ಕಲಿ ಎಂಬ ಅಂದದ ದಿರಿಸನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಇಂದಿನ ಟ್ರೆಂಡ್‌ ಆಗಿರುವ ಗೌನ್ ಶೈಲಿಯ ಸಲ್ವಾರ್ ಸೂಟ್‌ ಗಳನ್ನ, ಅನಾರ್ಕಲಿಗಳನ್ನ ನೀವು ಖರೀದಿಸಬಹುದು.

ಲೆಹೆಂಗಾ ಟ್ರೆಂಡ್ಸ್

ಲೆಹೆಂಗಾಗಳು ಖಂಡಿತವಾಗಿಯೂ ಭಾರತೀಯ ಎತ್ನಿಕ್‌ ವೇರ್‌ ಜಗತ್ತಿನ ಅವಶ್ಯಕ ಮತ್ತು ಅನಿವಾರ್ಯ ಭಾಗಗಳಾಗಿವೆ. ಲೆಹೆಂಗಾ ಧರಿಸಿದ ಸ್ತ್ರೀ ಎಲ್ಲರ ಕೇಂದ್ರಬಿಂದುವಾಗಿ, ಆಕರ್ಷಕವಾಗಿ ಕಾಣುತ್ತಾಳೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇತ್ತೀಚೆಗೆ ಗಮನ ಸೆಳೆಯುತ್ತಿರುವ ಡಿಸೈನರ್ ಲೆಹೆಂಗಾಗಳನ್ನ ಧರಿಸಿ ನವರಾತ್ರಿಯನ್ನ ನೀವು ಆಚರಿಸಬಹುದು

ಸ್ಕರ್ಟ್‌‌ ನೊಂದಿಗೆ ಎತ್ನಿಕ್ಕುರ್ತಾ

ಎತ್ನಿಕ್‌ ಕುರ್ತಾವನ್ನ ಲಾಂಗ್ ಸ್ಕರ್ಟ್‌‌ ನೊಂದಿಗೆ ಧರಿಸುವುದೂ ಕೂಡ ಇಂದಿನ ಲೇಟೆಸ್ಟ್ ಟ್ರೆಂಡ್‌. ಅಂದದ ಲಾಂಗ್‌ ಸ್ಕರ್ಟ್‌‌ಗೆ ಒಪ್ಪುವಂಥ ಗ್ರ‍್ಯಾಂಡ್‌ ಕುರ್ತಾ ಧರಿಸಿ ನಿಮ್ಮ ದಸರಾ ಹಬ್ಬದ ಸೊಗಸನ್ನ ಇನ್ನಷ್ಟು ಇಮ್ಮಡಿಗೊಳಿಸಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...