alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಯನ್ನು ಗೆಲ್ಲಿಸಲು ಸೀರೆ ಕದ್ದ ಶಿಕ್ಷಕ

saree

ಛತ್ತೀಸ್ ಗಢದಲ್ಲಿ ಪತ್ನಿ ಸೌಂದರ್ಯ ಸ್ಪರ್ಧೆ ಗೆಲ್ಲಬೇಕು ಎಂಬ ಆಸೆ ಶಿಕ್ಷಕನನ್ನು ಜೈಲಿಗೆ ತಳ್ಳಿದೆ. ಬಿಲಾಶ್ಪುರದ ಉಡುಪುಗಳ ಶೋ ರೂಮ್ ನಲ್ಲಿ ನಡೆದ ಕಳವು ಪ್ರಕರಣ ಭೇದಿಸಿರುವ ಪೊಲೀಸರು, ಶಿಕ್ಷಕ ಅವನ ಪತ್ನಿ ಮತ್ತು ಸಂಬಂಧಿಯನ್ನು ಬಂಧಿಸಿದ್ದಾರೆ.

32 ವರ್ಷದ ಶ್ರೀಕಾಂತ್ ಗುಪ್ತಾ ಎಂಬ ಶಿಕ್ಷಕ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆತನ ಪತ್ನಿ ಪ್ರಮೀಳಾ ‘ಸ್ವರ್ಣ ಸುಂದರಿ’ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ಲು. ಪ್ರತಿ ವರ್ಷ ಮುಂಗಾರಿನಲ್ಲಿ ಆ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

ಸೌಂದರ್ಯ ಸ್ಪರ್ಧೆಯಲ್ಲಿ ಉಟ್ಟುಕೊಳ್ಳಲು ಪ್ರಮೀಳಾ ಬಳಿ ದುಬಾರಿ ಸೀರೆಗಳಿರಲಿಲ್ಲ. ಅವುಗಳನ್ನು ಕೊಂಡುಕೊಳ್ಳುವಷ್ಟು ಹಣ ಶ್ರೀಕಾಂತ್ ಬಳಿ ಇರಲಿಲ್ಲ. ಹಾಗಾಗಿ ಪತ್ನಿಗೋಸ್ಕರ ಶ್ರೀಕಾಂತ್ ಸೀರೆಗಳನ್ನು ಶೋರೂಮ್ ನಿಂದ ಕದ್ದು ತಂದಿದ್ದ. ಅದೇ ಸೀರೆಯನ್ನು ಉಟ್ಟು ಪ್ರಮೀಳಾ ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದ್ಲು.

ಸೀರೆಯನ್ನು ಗಮನಿಸಿದ ಯಾರೋ ಮಾಲ್ ಮಾಲೀಕನಿಗೆ ಮಾಹಿತಿ ನೀಡಿದ್ದರು. ಕೂಡಲೇ ಆತ ಪೊಲೀಸರನ್ನು ಅಲರ್ಟ್ ಮಾಡಿದ್ದ. ಶ್ರೀಕಾಂತ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸೀರೆ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...