alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಳೆ ಮರದಿಂದ ತಯಾರಾಗಿದೆ ಸ್ಪೆಷಲ್ ಜೀನ್ಸ್

bananafibre-jeans2_fusion_werindia

ಚಳಿಗಾಲ, ಬೇಸಿಗೆ ಎಲ್ಲಾ ಸಮಯದಲ್ಲೂ ಜೀನ್ಸ್ ಧರಿಸಿದ್ರೆ ತುಂಬಾ ಕಂಫರ್ಟೆಬಲ್ ಆಗಿರುತ್ತೆ. ಬೇಸಿಗೆಯಲ್ಲಿ ಜೀನ್ಸ್ ಧರಿಸಿದ್ರೆ ಸೆಕೆ ಕೂಡ ಕಡಿಮೆ, ಜೊತೆಗೆ ಕ್ಯಾಶುವಲ್ ಲುಕ್ ಚೆನ್ನಾಗಿ ಕಾಣಿಸುತ್ತೆ. ಜೀನ್ಸ್ ಕೂಡ ಈಗ ಪರಿಸರ ಸ್ನೇಹಿಯಾಗ್ತಿದೆ. ಚೆನ್ನೈನಲ್ಲಿ ಬಾಳೆ ಮರದಿಂದ ಜೀನ್ಸ್ ತಯಾರಿಸಲಾಗ್ತಿದೆ.

ಅನಕಪುತೂರ್ ಗ್ರಾಮದ ನೇಕಾರರು ಈ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಬೇಸಿಗೆಗೆ ಬಾಳೆ ಮರದ ಜೀನ್ಸ್ ಹೇಳಿ ಮಾಡಿಸಿದಂತಿರುತ್ತೆ. ಬನಾನಾ ಫೈಬರ್ ಮತ್ತು ಹತ್ತಿಯನ್ನು ಬಳಸಿ ಈ ಜೀನ್ಸ್ ಗಳನ್ನು ನೇಯಲಾಗಿದೆ. ಇದು ನೀರನ್ನು ಹೀರಿಕೊಳ್ಳೋದ್ರಿಂದ ದೇಹವನ್ನು ತಂಪಾಗಿ ಇಡಬಲ್ಲದು.

ಬನಾನಾ ಫೈಬರ್ ನಿಂದ ಜೀನ್ಸ್ ಮತ್ತು ಸ್ಕರ್ಟ್ ಗಳನ್ನು ತಯಾರಿಸಲಾಗಿದೆ. ಈ ಜೀನ್ಸ್ ಗಳಲ್ಲಿ ಇನ್ನೂ ಒಂದು ಸ್ಪೆಷಾಲಿಟಿ ಇದೆ. ಜೀನ್ಸ್ ಗೆ ಅಳವಡಿಸಿರುವ ಬಟನ್ ಗಳನ್ನು ತೆಂಗಿನ ಕಾಯಿಯ ಚಿಪ್ಪಿನಿಂದ ತಯಾರಿಸಲಾಗಿದೆ. ಮೆಟಲ್ ಅಥವಾ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಿಲ್ಲ. ಈ ಮೂಲಕ ಸಂಪೂರ್ಣ ಪರಿಸರ ಸ್ನೇಹಿಯಾಗಿರೋ ವಿಶಿಷ್ಟ ಜೀನ್ಸ್ ಗಳನ್ನು ತಯಾರು ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...