alex Certify
ಕನ್ನಡ ದುನಿಯಾ       Mobile App
       

Kannada Duniya

ಹುಬ್ಬಿನ ಮೇಲೆ ಜಡೆ, ಇದು ಹೊಸ ಫ್ಯಾಷನ್ ಟ್ರೆಂಡ್….

ಸುಂದರವಾದ ಉದ್ದನೆಯ ಜಡೆ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ? ಆದ್ರೆ ಹುಬ್ಬಿನ ಮೇಲೆ ಜಡೆ ಇದ್ರೆ ಹೇಗಿರಬಹುದು ಅನ್ನೋದನ್ನು ಊಹಿಸ್ಕೊಳ್ಳಿ. ಅಷ್ಟು ಸುಲಭವಾಗಿ ಇದು ಎಲ್ಲರಿಗೂ ಇಷ್ಟವಾಗೋದಿಲ್ಲ. ಆದ್ರೆ ಜಡೆ ಹುಬ್ಬು ಲೇಟೆಸ್ಟ್ ಬ್ಯೂಟಿ ಟ್ರೆಂಡ್.

ಯುವ ಮೇಕಪ್ ಆರ್ಟಿಸ್ಟ್ ಎರೋಸ್ ಗೊಂಜಾಲೆಜ್ ಎಂಬಾತ ತನ್ನ ಹುಬ್ಬನ್ನು ಇದೇ ರೀತಿ ಮಾಡ್ಕೊಂಡು ಇನ್ ಸ್ಟಾಗ್ರಾಮ್ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದ. ಹೇರ್ ಜೆಲ್, ಸ್ಪಿರಿಟ್, ಗಮ್ ಎಲ್ಲವನ್ನೂ ಬಳಸಿ ಸುಮಾರು ಒಂದು ಗಂಟೆ ಕಷ್ಟಪಟ್ಟು ಹುಬ್ಬಿನ ಮೇಲೆ ಎರೋಸ್ ಜಡೆ ಹೆಣೆಯಲು ಟ್ರೈ ಮಾಡಿದ್ದಾನೆ.

ಆದ್ರೆ ಸಾಧ್ಯವಾಗಿಲ್ಲ. ಕೊನೆಗೆ ರಿಸ್ಕೇ ಬೇಡ ಅಂದ್ಕೊಂಡು ಫೋಟೋ ಎಡಿಟ್ ಮಾಡಿ ಹಾಕಿದ್ದಾನಂತೆ. ಮೊದಲು ಈ ಫೋಟೋ ನೋಡಿದವರೆಲ್ಲ ನಿಜಕ್ಕೂ ಹುಬ್ಬಿನ ಮೇಲೆ ಜಡೆ ಹೆಣೆಯಲಾಗಿದೆ ಅಂತಾನೇ ಭಾವಿಸಿದ್ರು. ಈ ಜಡೆ ಹುಬ್ಬಿನ ಫೋಟೋ ಈಗ ವೈರಲ್ ಆಗಿದೆ.

ವಿದೇಶೀಯರಂತೂ ಈ ಹೊಸ ಫ್ಯಾಷನ್ ಟ್ರೆಂಡ್ ಹಿಂದೆ ಬಿದ್ದಿದ್ದಾರೆ. ಹೊಸ ಲುಕ್ ಗಾಗಿ ಹುಬ್ಬಿನ ಮೇಲೂ ಜಡೆ ಹೆಣೆದುಕೊಳ್ತಿದ್ದಾರೆ. ಆದ್ರೆ ಈ ಜಡೆ ಹುಬ್ಬು ಒಂದು ರೀತಿಯ ವಿಚಿತ್ರ ಲುಕ್ ಕೊಡೋದಂತೂ ಗ್ಯಾರಂಟಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...