alex Certify ʼಗುಲಾಬಿʼ ಎಸಳುಗಳಿಂದ ಹೆಚ್ಚುತ್ತದೆ ತುಟಿಯ ಅಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗುಲಾಬಿʼ ಎಸಳುಗಳಿಂದ ಹೆಚ್ಚುತ್ತದೆ ತುಟಿಯ ಅಂದ

Beautiful Rose Flowers | Beauty spells, Beauty hacks, Beauty tips in urduಕಪ್ಪಾದ ತುಟಿಯನ್ನು ಮರೆಮಾಚಲು ಮೇಕಪ್ ಮಾಡಿದರೆ ತುಟಿ ಮತ್ತಷ್ಟು ಕಪ್ಪಾಗುತ್ತದೆ. ಆದ್ದರಿಂದ ತುಟಿಯ ಕಪ್ಪು ಬಣ್ಣವನ್ನು ಹೋಗಲಾಡಿಸಲು ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಇಲ್ಲಿರುವ ಕೆಲ ಟಿಪ್ಸ್ ತುಟಿಯ ರಂಗನ್ನು ಹೆಚ್ಚಿಸುವಲ್ಲಿ ಡೌಟೇ ಬೇಡ.

* ಗುಲಾಬಿ ಎಸಳುಗಳನ್ನು ಜಜ್ಜಿ ಅದಕ್ಕೆ ಒಂದು ಚಮಚ ಹಾಲು ಹಾಕಬೇಕು. ದಿನದಲ್ಲಿ ಮೂರು ಬಾರಿ ಇದರಿಂದ ತುಟಿಗಳನ್ನು ತೊಳೆಯಬೇಕು. ಇದು ತುಟಿಗೆ ಒಳ್ಳೆಯ ಬಣ್ಣ ನೀಡುವುದು.

* ಒಂದು ಚಮಚ ಹಾಲಿನ ಕೆನೆಗೆ ಕೆಲವು ಹನಿ ಗ್ಲಿಸರಿನ್‌ ಹಾಕಬೇಕು. ಇದನ್ನು ತುಟಿಗೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆಯೇ ಬಿಡಬೇಕು ಬಳಿಕ ತಣ್ಣೀರಿನಿಂದ ತೊಳೆಯಬೇಕು.

* ಮಲಗುವ ಮೊದಲು ತುಟಿಗಳಿಗೆ ಜೇನುತುಪ್ಪ ಹಚ್ಚಿಕೊಳ್ಳಬೇಕು. ರಾತ್ರಿಯಿಡೀ ಹಾಗೆಯೇ ಬಿಡಬೇಕು. ಇದು ತುಟಿಗಳಿಗೆ ಗುಲಾಬಿ ಬಣ್ಣ ನೀಡುವುದು ಮಾತ್ರವಲ್ಲದೆ ಮೃದುವಾಗಿಸುತ್ತದೆ.

* ಆಲಿವ್‌ ಆಯಿಲ್‌, ಜೇನುಮೇಣ, ಐದು ಹನಿ ರೋಸ್ಮೆರಿ ಎಣ್ಣೆ, ಐದು ಹನಿ ವಿಟಮಿನ್‌ ಇ ಆಯಿಲ್‌ ಮತ್ತು ಒಂದು ಚಮಚ ಗ್ರೇಪ್‌ ಸೀಡ್‌ ಆಯಿಲ್‌ ಹಾಕಿಕೊಂಡು ಚೆನ್ನಾಗಿ ಮಿಕ್ಸ್‌ ಮಾಡಬೇಕು. ಇದನ್ನು ಪ್ರತಿದಿನ ತುಟಿಗಳಿಗೆ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಸಿಗುವುದು.

* ಜೇನುತುಪ್ಪ, ನಿಂಬೆರಸ ಮತ್ತು ವಿಟಮಿನ್‌ ಇ ಆಯಿಲ್‌ ಅನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಇದನ್ನು ತುಟಿಗಳಿಗೆ ಹಚ್ಚಿಕೊಂಡು ಒಣಗಲು ಬಿಡಬೇಕು. ಬಳಿಕ ತಣ್ಣೀರಿನಿಂದ ತೊಳೆಯಬೇಕು. ಇದು ಕೂಡ ತುಟಿಗಳಿಗೆ ಬಣ್ಣ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...