alex Certify ʼಹಾಗಲಕಾಯಿʼ ಸೌಂದರ್ಯ ರಕ್ಷಣೆಗೂ ಸಹಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಾಗಲಕಾಯಿʼ ಸೌಂದರ್ಯ ರಕ್ಷಣೆಗೂ ಸಹಕಾರಿ

ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ಇದನ್ನು ತಿಂದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ.

ಆದರೆ ಕಹಿಯಾದ ಈ ಹಾಗಲಕಾಯಿ ಮುಖದ ಸೌಂದರ್ಯಕ್ಕೂ ತನ್ನದೇ ಆದ ಕೊಡುಗೆ ನೀಡಿದೆ. ಹಾಗಲಕಾಯಿಂದ ಹೊಳೆಯುವ ಮುಖದ ಚರ್ಮ ಹೇಗೆ ಪಡೆಯಬಹುದು ಅಂತ ತಿಳಿಯಿರಿ.

* ಹಾಗಲಕಾಯಿಯ ತುಂಡುಗಳನ್ನು ರುಬ್ಬಿ ಪೇಸ್ಟ್‌ ಮಾಡಿ. ಇದಕ್ಕೆ ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಲೋಳೆಸರದ ರಸ ಹಾಕಿ ಮಿಶ್ರ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆದರೆ ತುರಿಕೆ ಕಡಿಮೆಯಾಗುತ್ತದೆ.

ನಿಮ್ಮ ಕಣ್ಣಿನ ಬಣ್ಣ ಹೇಳುತ್ತೆ ನಿಮ್ಮ ಸ್ವಭಾವ

* ಹಾಗಲಕಾಯಿ ಜ್ಯೂಸ್‌ ಅನ್ನು ಮುಖಕ್ಕೆ ಸವರಿಕೊಳ್ಳಿ. ಐದು ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಪ್ರತಿ ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ ಹೊಳೆಯುವ ಚರ್ಮ ಪಡೆಯಬಹುದು.

* ಸೆಕೆ ಗುಳ್ಳೆ, ಬೊಕ್ಕೆಗಳ ನಿವಾರಣೆಗೆ ಸ್ವಲ್ಪ ಹಾಗಲಕಾಯಿಯ ತುಂಡುಗಳನ್ನು ನೀರಿನಲ್ಲಿ ಬೇಯಿಸಿ. ನೀರು ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವಾಗ ಕುದಿಸುವುದನ್ನು ನಿಲ್ಲಿಸಿ, ನೀರು ತಣ್ಣಗಾಗಲು ಬಿಡಿ. ಈ ನೀರಿನಲ್ಲಿ ಹತ್ತಿ ಉಂಡೆಯನ್ನು ಅದ್ದಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...