alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿನಂತೆ ಖರ್ಚಾಯ್ತು ಹಣ, ಮುದುಡಿ ಹೋಯ್ತು ದೇಹ..!

look good

ಮೋಹಕ ಮೈಕಟ್ಟು, ಸುಂದರ ದೇಹ ಹೊಂದುವ ಕನಸು ಪ್ರತಿಯೊಬ್ಬರಿಗೂ ಇರುತ್ತೆ. ಕೆಲವರು ತಮ್ಮ ರೂಪವನ್ನು ಬದಲಾಯಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಆದರೆ ಕೊನೆಗೆ ಸಿಗುವ ಫಲಿತಾಂಶ ಮಾತ್ರ ಅವರ ನಿದ್ದೆಗೆಡಿಸುತ್ತದೆ.

ಶಸ್ತ್ರಚಿಕಿತ್ಸೆ, ಮೇಕಪ್, ಔಷಧಿ ಹೀಗೆ ವಿವಿಧ ಬಗೆಯಿಂದ ಇಂದು ನಮ್ಮ ಸೌಂದರ್ಯವನ್ನು ನಾವು ಬದಲಾಯಿಸಿಕೊಳ್ಳಬಹುದು. ಜಾಕೋಬ್ ಹೆಸರಿನ ವ್ಯಕ್ತಿ ಕೂಡ ಇಂತಹದ್ದೇ ಪ್ರಯತ್ನಕ್ಕೆ ಕೈ ಹಾಕಿದ್ದ.

ಅತೀ ಬೊಜ್ಜಿನಿಂದ ಬಳಲುತ್ತಿದ್ದ ಆತ, ಅದನ್ನು ಕರಗಿಸಿಕೊಂಡು ಸ್ಲಿಮ್ ಆಗಲು ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾನೆ. ಬೊಜ್ಜು ಕರಗಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾನೆ. ಶಸ್ತ್ರ ಚಿಕಿತ್ಸೆ ಆತನ ಕನಸು ನನಸು ಮಾಡುವ ಬದಲು, ದೊಡ್ಡ ಸಮಸ್ಯೆ ತಂದೊಡ್ಡಿದೆ. ಆತ ಅತೀ ಸ್ಲಿಮ್ ಆಗಿದ್ದು, ಹೊಟ್ಟೆ ಭಾಗದಲ್ಲೆಲ್ಲ ಚರ್ಮ ಸುಕ್ಕುಗಟ್ಟಿದೆ. ಈಗ ಆತನನ್ನು ಸಾಮಾನ್ಯ ಮನುಷ್ಯರಂತೆ ಮಾಡಲು ಮತ್ತೆ ಮೂರು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...