alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರೂಪದರ್ಶಿಯ ಎತ್ತರ ನೋಡಿದ್ರೆ ದಂಗಾಗ್ತೀರಿ..!

ek-2

ಈಕೆ ರಷ್ಯಾದ ರೂಪದರ್ಶಿ, ಹೆಸರು ಎಕಟೆರಿನಾ ಲಿಸಿನಾ. ರಷ್ಯಾದ ಪೆಂಜಾ ನಿವಾಸಿಯಾಗಿರೋ 29ರ ಹರೆಯದ ಎಕಟೆರಿನಾ ವಿಶ್ವದ ಅತಿ ಎತ್ತರದ ಮಾಡೆಲ್. ರಷ್ಯಾದ ಅತಿ ಎತ್ತರದ ಮಹಿಳೆಯೂ ಹೌದು. ಮೂಲತಃ ಈಕೆ ಬಾಸ್ಕೆಟ್ ಬಾಲ್ ಆಟಗಾರ್ತಿ.

ek-3

2014ರಲ್ಲಿ ಬಾಸ್ಕೆಟ್ ಬಾಲ್ ಗೆ ಗುಡ್ ಬೈ ಹೇಳಿ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾಳೆ. ಇವಳ ಕಾಲುಗಳ ಉದ್ದ 52 ಇಂಚು. ವಿಶ್ವದ ಅತಿ ಉದ್ದದ ಕಾಲುಗಳುಳ್ಳವಳು ಎಂಬ ದಾಖಲೆ ಮಾಡುವುದು ಎಕಟೆರಿನಾಳ ಬಯಕೆ.

ಸದ್ಯ ಆ ದಾಖಲೆ ಹೊಂದಿರುವ ಮಹಿಳೆ 6 ಅಡಿ 8 ಇಂಚು ಎತ್ತರವಿದ್ದಾಳಂತೆ. ಅವಳಿಗಿಂತ ಎಕಟೆರಿನಾ ಎತ್ತರವಿದ್ದಾಳೆ. ಹಾಗಾಗಿ ವಿಶ್ವದಾಖಲೆ ತನ್ನದಾಗಬಹುದು ಅನ್ನೋ ಆಶಾವಾದ ಈ ರೂಪದರ್ಶಿಗಿದೆ.

ಎಕಟೆರಿನಾ ಹೆಸರಲ್ಲಿ ಇನ್ನೂ ಒಂದಷ್ಟು ದಾಖಲೆಗಳಿವೆ. ರಷ್ಯಾದಲ್ಲಿ ಅತಿ ದೊಡ್ಡ ಪಾದ ಹೊಂದಿದ ಮಹಿಳೆ ಅನ್ನೋ ಹೆಗ್ಗಳಿಕೆಯೂ ಇವಳ ಪಾಲಾಗಿದೆ. ಎಕಟೆರಿನಾ 13 ನಂಬರಿನ ಚಪ್ಪಲಿ ಮತ್ತು ಶೂಗಳನ್ನು ಧರಿಸ್ತಾಳೆ.

2008ರ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದ ರಷ್ಯಾದ ಬಾಸ್ಕೆಟ್ ಬಾಲ್ ತಂಡದಲ್ಲಿ ಎಕಟೆರಿನಾ ಕೂಡ ಇದ್ಲು. ರಷ್ಯಾ ಕಂಚಿನ ಪದಕ ಗೆದ್ದಿತ್ತು. ಇವಳ ಕುಟುಂಬದಲ್ಲಿ ಎಲ್ಲರೂ ಎತ್ತರವಾಗಿಯೇ ಇದ್ದಾರೆ. ಎಕಟೆರಿನಾ ತಂದೆಯ ಎತ್ತರ 6 ಅಡಿ 5 ಇಂಚು.

ತಾಯಿ ಕೂಡ 6 ಅಡಿ ಎತ್ತರವಿದ್ದಾರೆ. ಸಹೋದರ 6.6 ಅಡಿ ಎತ್ತರವಿದ್ದಾನೆ. ಆದ್ರೆ ಎಕಟೆರಿನಾ ಎಲ್ಲರನ್ನೂ ಮೀರಿಸಿದ್ದಾಳೆ. ಎಕಟೆರಿನಾ ಹುಟ್ಟಿದಾಗ್ಲೇ ಇತರ ಮಕ್ಕಳಿಗಿಂತ ಉದ್ದವಿದ್ಲು ಅಂತಾ ಆಕೆಯ ತಂದೆ ತಿಳಿಸಿದ್ದಾರೆ.

ek-4

 

ek

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...