alex Certify
ಕನ್ನಡ ದುನಿಯಾ       Mobile App
       

Kannada Duniya

ತ್ವಚೆ ʼಸೌಂದರ್ಯʼಕ್ಕೆ ದಿವ್ಯ ಔಷಧ ಕಡಲೇ ಹಿಟ್ಟು

ಕಡಲೇ ಹಿಟ್ಟು ಯಾರಿಗೆ ಗೊತ್ತಿಲ್ಲ ಹೇಳಿ..? ಭಾರತೀಯ ಅಡುಗೆಗಳ ಪದಾರ್ಥಗಳಲ್ಲಿ ಕಡಲೇ ಹಿಟ್ಟು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ಕಡಲೇ ಹಿಟ್ಟಿನಲ್ಲಿ ಸಾಕಷ್ಟು ತಿನಿಸುಗಳನ್ನು ಮಾಡಬಹುದಾಗಿದೆ. ಅಷ್ಟೆ ಅಲ್ಲ ಈ ಕಡಲೇ ಹಿಟ್ಟು ಅಡುಗೆಯಂತೆ ತ್ವಚೆಗೂ, ಆರೋಗ್ಯಕ್ಕೂ ಉತ್ತಮವಾಗಿದೆ.

ಇನ್ನು ಆರೋಗ್ಯದ ಜೊತೆ ಜೊತೆಗೆ ಕಡಲೇ ಹಿಟ್ಟು ತ್ವಚೆಗೂ ದಿವ್ಯ ಔಷಧ ಅನ್ನೋದು ನಮ್ಮ ಪೂರ್ವಜರ ಮಾತು. ಹಿಂದಿನ ಕಾಲದಿಂದಲೂ ಕಡಲೇ ಹಿಟ್ಟನ್ನು ತ್ವಚೆಗೆ ಉಪಯೋಗಿಸುತ್ತಿದ್ದರೆ. ಇಂದಿನ ಕಾಲದಲ್ಲೂ ಕಡಲೇ ಹಿಟ್ಟನ್ನು ತ್ವಚೆಗೆ ಉಪಯೋಗಿಸುವವರಿದ್ದಾರೆ.

ಕಡಲೇ ಹಿಟ್ಟನ್ನು ಮುಖಕ್ಕೆ ಲೇಪನ ಮಾಡುವುದರಿಂದ ತ್ವಚೆ ಕಾಂತಿಯುತವಾಗುತ್ತದೆ. ಇನ್ನು, ಕಡಲೇ ಹಿಟ್ಟನ್ನು ಪ್ರತಿನಿತ್ಯ ಉಪಯೋಗಿಸುವುದರಿಂದ ಮೊಡವೆ, ಮುಖದ ಮೇಲಿನ ಕಪ್ಪು ಕಲೆಗಳು ಹೋಗುತ್ತವೆ. ಅಷ್ಟೆ ಅಲ್ಲ ಈ ಕಡಲೇ ಹಿಟ್ಟಿನ ಜೊತೆ ಹಾಲು ಹಾಗೂ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಇನ್ನೂ ಉತ್ತಮ. ಇನ್ನು ಹಸಿ ಹಾಲಿನಲ್ಲಿ ಕಡಲೇ ಹಿಟ್ಟು ಬೆರೆಸಿ ಉಪಯೋಗಿಸುವುದರಿಂದ ನ್ಯಾಚುರಲ್ ಮಾಯಿಶ್ಚರೈಸರ್  ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...