alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಾಯಿ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ !

typical-adult-bully-pitbull

ನಿಯತ್ತಿಗೆ ಇನ್ನೊಂದು ಹೆಸರು ನಾಯಿ. ನಾಯಿ ಸಾಕೋದು ಕೆಲವರಿಗೆ ಹವ್ಯಾಸವಾದ್ರೆ ಮತ್ತೆ ಕೆಲವರಿಗೆ ಬ್ಯುಸಿನೆಸ್. ನಾಯಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ. ಸರ್ಕಸ್, ಸ್ಪರ್ಧೆಗಳಲ್ಲಿ ನಾಯಿಗಳು ಪಾಲ್ಗೊಂಡು ಎಲ್ಲರ ಗಮನ ಸೆಳೆಯುತ್ತವೆ. ಒಳ್ಳೆ ತಳಿಯ, ತರಬೇತಿ ಪಡೆದ ನಾಯಿಗಳ ಬೆಲೆ ಹೆಚ್ಚೆಂದ್ರೆ 50 ಲಕ್ಷ ಇರಬಹುದೇನೋ. ಆದ್ರೆ ಇಲ್ಲೊಂದು ನಾಯಿ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳ್ತಿರಾ.

ಯಸ್, ಆ ನಾಯಿಯ ಬೆಲೆ 1 ಕೋಟಿ ರೂಪಾಯಿ. ಪಂಜಾಬಿನ ಮೋಗಾದ ಧಿಲ್ಲೋನ್ ಕುಟುಂಬದ ನಾಯಿ ಇದು. ಎರಡು ವರ್ಷಗಳ ಹಿಂದೆ ಅಮೆರಿಕಾದಿಂದ 28 ಲಕ್ಷ ರೂಪಾಯಿ ನೀಡಿ ಇದನ್ನು ತರಲಾಗಿದೆಯಂತೆ. ಇದು ಅಮೆರಿಕಾದ ಪ್ರಮುಖ ನಾಯಿ ತಳಿಗಳಲ್ಲಿ ಒಂದಾದ ಬುಲ್ಲಿ ತಳಿಯ ನಾಯಿ. ವಿಶೇಷ ಅಂದ್ರೆ ಇದು ವಿಶ್ವ ಚಾಂಪಿಯನ್ ನಾಯಿ ಡ್ಯಾಕ್ಸ್ನ ಸಂತತಿ.

ನಾಯಿ ಆಹಾರದ ಬಗ್ಗೆ ಹೇಳೋದಾದ್ರೆ ಇದು ಪ್ರತಿ ಬಾರಿ 1 ಕೆ.ಜಿ ಮಾಂಸ ತಿನ್ನುತ್ತದೆ. ಬಾದಾಮಿ, ಪಿಸ್ತಾ ತಿನ್ನುವುದಲ್ಲದೆ, 10 ಮೊಟ್ಟೆ ಇರಬೇಕು. ನಾಯಿ ಆಹಾರ, ಔಷಧಿ ಇತರ ಖರ್ಚು ಸೇರಿ ತಿಂಗಳಿಗೆ 25 ಸಾವಿರ ರೂಪಾಯಿ ಬೇಕು.

ನಾಯಿ ಅಮೆರಿಕಾ ತಳಿಯಾಗಿರುವುದರಿಂದ ಅದರ ನಿರ್ವಹಣೆಯನ್ನು ಬಹಳ ನಾಜೂಕಾಗಿ ಮಾಡಬೇಕು. ಬೇಸಿಗೆಯಲ್ಲಿ ಎರಡು ಎಸಿ ಇದಕ್ಕೆಂದು ಮೀಸಲು. ಚಳಿಗಾಲದ ಸಮಯದಲ್ಲಿ ಬೆಚ್ಚಗಿಡುವ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ಸದ್ಯ ಮಾಲಿಕ ನಾಯಿ ಮರಿಯ ನಿರೀಕ್ಷೆಯಲ್ಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...