alex Certify ಲೈಂಗಿಕ ಜೀವನವನ್ನು ಸಂಪೂರ್ಣ ಹಾಳು ಮಾಡುತ್ತೆ ಈ ಖಾಯಿಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಜೀವನವನ್ನು ಸಂಪೂರ್ಣ ಹಾಳು ಮಾಡುತ್ತೆ ಈ ಖಾಯಿಲೆ

ಲೈಂಗಿಕ ಜೀವನದ ಬಗ್ಗೆ ಜನರು ಈಗ್ಲೂ ಹೆಚ್ಚಾಗಿ ಮಾತನಾಡುವುದಿಲ್ಲ. ಕೆಲವೊಂದು ಸಮಸ್ಯೆಗಳು ಲೈಂಗಿಕ ಜೀವನವನ್ನು ಸಂಪೂರ್ಣ ಹಾಳು ಮಾಡುತ್ತದೆ. ಅವುಗಳಲ್ಲಿ ಪೆರೋನೀಸ್ ಒಂದು. ಇದು ಪುರುಷರನ್ನು ಕಾಡುವ ಖಾಯಿಲೆ.

ಪುರುಷರ ಖಾಸಗಿ ಭಾಗದಲ್ಲಿ ಕೆಲವು ಅಂಗಾಂಶಗಳು ವಿಭಿನ್ನವಾಗಿ ಬೆಳೆಯುತ್ತವೆ. ಈ ರೋಗವು ಕ್ಯಾನ್ಸರ್ ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ರೋಗದಲ್ಲಿ ನಿಮಿರುವಿಕೆಯ ಸಮಯದಲ್ಲಿ ಪುರುಷರ ಖಾಸಗಿ ಭಾಗವು ಬಾಗುತ್ತದೆ. ಕೆಲವೊಮ್ಮೆ ನೋವು ಕಾಣಿಸಿಕೊಳ್ಳುತ್ತದೆ.

ಸ್ಟೀಫನ್ ಜೋನ್ಸ್ ತಮ್ಮ ಅನುಭವವನ್ನು ಬ್ರಿಟಿಷ್ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೆರೋನೀಸ್ ಕಾಯಿಲೆಯಿಂದ ಬಳಲುತ್ತಿರುವ ಸ್ಟೀಫನ್ ಜೋನ್ಸ್ ಮೊದಲ ಬಾರಿಗೆ ಖಾಸಗಿ ಭಾಗದಲ್ಲಿ ಗಾಯದ ಅಂಗಾಂಶವನ್ನು ನೋಡಿ ಅಚ್ಚರಿಗೊಂಡಿದ್ದರಂತೆ.  ಚರ್ಮವು ಎಲ್ಲೋ ಅಂಟಿಕೊಂಡಿರುವಂತೆ ಭಾವಿಸಿದ್ದರಂತೆ. ಕೆಲವು ದಿನಗಳ ನಂತರ ನೋವು ಅನುಭವಿಸಲು ಪ್ರಾರಂಭಿಸಿತು ಎನ್ನುತ್ತಾರೆ ಜೋನ್ಸ್.

ಈ ರೋಗವು ಹೆಚ್ಚಾಗಿ 40 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಕೆಲವೊಮ್ಮೆ ಯುವಕರೂ ಇದಕ್ಕೆ ತುತ್ತಾಗುತ್ತಾರೆ.ಶಸ್ತ್ರಚಿಕಿತ್ಸೆ ಮೂಲಕ ಇದನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳ್ತಾರೆ. ಆದ್ರೆ ಖಾಯಿಲೆ ಪತ್ತೆಗೆ 3 ತಿಂಗಳು ಹಿಡಿಯುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...