alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಭೋಗದ ವೇಳೆ ಈ ತಪ್ಪು ಮಾಡಿದ್ರೆ ಹೃದಯಾಘಾತವಾಗೋದು ನಿಶ್ಚಿತ

ಲೈಂಗಿಕತೆ ದಾಂಪತ್ಯವನ್ನು ಗಟ್ಟಿಗೊಳಿಸುವ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಸಂಶೋಧನೆಗಳು ಇದನ್ನು ಸ್ಪಷ್ಟಪಡಿಸಿವೆ. ಸಂಭೋಗ ಒಂದು ರೀತಿಯ ವ್ಯಾಯಾಮವಿದ್ದಂತೆ. ತಿಂಗಳಿಗೊಮ್ಮೆ ಸಂಭೋಗ ಬೆಳೆಸುವ ಪುರುಷರಿಗಿಂತ ವಾರಕ್ಕೆ ಎರಡು ಬಾರಿ ಲೈಂಗಿಕ ಸಂಬಂಧ ಹೊಂದುವ ಪುರುಷರಿಗೆ ಹೃದಯಾಘಾತವಾಗುವ ಅಪಾಯ ಕಡಿಮೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಸಂಭೋಗಿಸುವುದರಿಂದ ದೇಹದಲ್ಲಿ ಇಮ್ಯುನೊಗ್ಲಾಬಿನ್ ಎ ಮಟ್ಟ ಹೆಚ್ಚಾಗುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೆಲವೊಮ್ಮೆ ಸಂಭೋಗದ ವೇಳೆ ಹೃದಯಾಘಾತವಾಗುವ ಸಾಧ್ಯತೆಯಿರುತ್ತದೆ. ಅದಕ್ಕೆ ಕೆಲ ಕಾರಣಗಳಿವೆ. ಮೊದಲೇ ಹೇಳಿದಂತೆ ಲೈಂಗಿಕ ಕ್ರಿಯೆ ವ್ಯಾಯಾಮವಿದ್ದಂತೆ.ಈ ಸಮಯದಲ್ಲಿ ದೇಹದ ರಕ್ತದ ಹರಿವು ಹೆಚ್ಚಾಗುತ್ತದೆ. ಹೃದಯ ಬಡಿತವೂ ಹೆಚ್ಚಾಗುತ್ತದೆ. ಕೆಲ ದಂಪತಿ  ಲೈಂಗಿಕ ಜೀವನವನ್ನು ಆನಂದಿಸಲು ದಿನಕ್ಕೆ ಹಲವಾರು ಬಾರಿ ಶಾರೀರಿಕ ಸಂಬಂಧ ಬೆಳೆಸುತ್ತಾರೆ.ಇದು ಹೃದಯಕ್ಕೆ ಮಾರಕವಾಗುತ್ತದೆ.

ಅನೇಕ ಬಾರಿ ದಂಪತಿ ತಮ್ಮ ನೀರಸ ಲೈಂಗಿಕ ಜೀವನಕ್ಕೆ ಬೇಸತ್ತು ಹೊಸ ಪ್ರಯೋಗಗಳಿಗೆ ಇಳಿಯುತ್ತಾರೆ. ಅವುಗಳಲ್ಲಿ ಕೆಲವು  ಅಪಾಯಕಾರಿಯಾಗಿರುತ್ತದೆ. ರಕ್ತದ ಹರಿವು ಕ್ಷೀಣಿಸಲು ಕಾರಣವಾಗುತ್ತದೆ ಮತ್ತು ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಹೃದಯಾಘಾತದ ಅಪಾಯವಿದೆ.

ವಯಾಗ್ರ ಸೇವನೆಯು ಹೃದಯದ ಮೇಲೂ ಪರಿಣಾಮ ಬೀರುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು.

 

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...