alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಸಂಸ್ಥಾಪಕನ ಸಂಪತ್ತಿನಲ್ಲಿ ಕುಸಿತ

ಸಾಮಾಜಿಕ ಜಾಲತಾಣಗಳ ಪೈಕಿ ಅಗ್ರಸ್ಥಾನದಲ್ಲಿರುವ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಕೈಗೊಂಡ ನಿರ್ಧಾರವೊಂದರ ಕಾರಣಕ್ಕಾಗಿ ಅವರ ಸಂಪತ್ತಿನಲ್ಲಿ ಶೇ. 4.4 ರಷ್ಟು ಕುಸಿತ ಕಂಡಿದ್ದು, ಒಟ್ಟು 3.3 ಬಿಲಿಯನ್ ಡಾಲರ್ ನಷ್ಟವುಂಟಾಗಿದೆ ಎನ್ನಲಾಗಿದೆ.

ಗುರುವಾರದಂದು ಫೇಸ್ ಬುಕ್ ನ್ಯೂಸ್ ಫೀಡ್ ನಲ್ಲಿ ಬದಲಾವಣೆ ಮಾಡಲಾಗಿದ್ದು, ಜಾಹೀರಾತಿಗಿಂತ ಹೆಚ್ಚು ಸ್ನೇಹಿತರು ಹಾಗೂ ಕುಟುಂಬದವರ ಪೋಸ್ಟ್ ಗೆ ಇದರಲ್ಲಿ ಆದ್ಯತೆ ನೀಡಲಾಗಿದೆ. ಇದಾದ ಬಳಿಕ ಗುರುವಾರ 187.77 ಡಾಲರ್ ಗೆ ಮಾರಾಟವಾಗಿದ್ದ ಫೇಸ್ ಬುಕ್ ಶೇರ್ ಗಳು ಶುಕ್ರವಾರದಂದು ಶೇ.4.4 ರಷ್ಟು ಇಳಿಕೆ ಕಂಡು 179.37 ಡಾಲರ್ ಗೆ ಮಾರಾಟವಾಗಿವೆ.

ತಮ್ಮ 19 ನೇ ವಯಸ್ಸಿನಲ್ಲಿ 2004 ರಲ್ಲಿ ಫೇಸ್ ಬುಕ್ ಸ್ಥಾಪಿಸಿದ್ದ ಮಾರ್ಕ್ ಜುಕರ್ಬರ್ಗ್ 2012 ರಲ್ಲಿ ಸಾರ್ವಜನಿಕ ವಲಯಕ್ಕೆ ಪ್ರವೇಶಿಸಿದ್ದರು. ಈಗಲೂ ಶೇ. 17 ರಷ್ಟು ಶೇರುಗಳನ್ನು ಮಾರ್ಕ್ ಜುಕರ್ಬರ್ಗ್ ಹೊಂದಿದ್ದು, ಜಗತ್ತಿನ ಅತಿ ಶ್ರೀಮಂತರ ಪೈಕಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...