alex Certify
ಕನ್ನಡ ದುನಿಯಾ       Mobile App
       

Kannada Duniya

ಆರಂಭವಾಯ್ತು ಮತ್ತೊಂದು ವಿಮಾನಯಾನ ಸಂಸ್ಥೆ

zoom-airಭಾರತದಲ್ಲಿ ಮತ್ತೊಂದು ವಿಮಾನಯಾನ ಸಂಸ್ಥೆ ಆರಂಭವಾಗಿದೆ. ಗುರ್ಗಾಂವ್ ನಲ್ಲಿ ಕೇಂದ್ರ ಕಛೇರಿ ಹೊಂದಿರುವ ಝೂಮ್ ಏರ್, ನವದೆಹಲಿಯಿಂದ ಕೋಲ್ಕತ್ತಾ ಮೂಲಕ ದುರ್ಗಾಪುರ್ ಗೆ ತನ್ನ ಮೊದಲ ಹಾರಾಟ ಆರಂಭಿಸಿದೆ.

ದಿನೇ ದಿನೇ ವಿಮಾನದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಕಾಲಿಟ್ಟಿರುವ ಝೂಮ್ ಏರ್ ಯಶಸ್ಸು ಗಳಿಸುವ ಲೆಕ್ಕಾಚಾರದಲ್ಲಿದೆ. 2015 ರಲ್ಲಿ ದೇಶಿಯ ವಿಮಾನಗಳಲ್ಲಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ 8.10 ಕೋಟಿ ಇದ್ದು, 2016 ರಲ್ಲಿ ಈ ಪ್ರಮಾಣ ಶೇ.23 ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಸುಮಾರು 10 ಕೋಟಿ ಮಂದಿ ವಿಮಾನದಲ್ಲಿ ಸಂಚರಿಸಿದ್ದಾರೆ.

ಮುಂದಿನ ದಿನಗಳಲ್ಲಿ ತನ್ನ ಸಂಚಾರವನ್ನು ದೆಹಲಿಯಿಂದ ಅಮೃತಸರ, ಸೂರತ್ ಹಾಗೂ ಭಾವನಗರ್ ಗೆ ವಿಸ್ತರಿಸುವ ಯೋಜನೆ ಹೊಂದಿರುವ ಝೂಮ್ ಏರ್, ಎರಡನೇ ಹಂತದಲ್ಲಿ ತಿರುಪತಿ, ವಿಜಯವಾಡ, ಮುಂಬೈ, ಶಿಲ್ಲಾಂಗ್, ಅಲಹಾಬಾದ್, ಗೋರಕ್ಪುರ್, ಇಂದೋರ್ ಮೊದಲಾದ ಮಾರ್ಗಗಳಲ್ಲೂ ಹಾರಾಟ ಆರಂಭಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...