alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಶ್ರೀಮಂತನಿಗೆ 2000 ರೂ.ಗೆ ಸಿಕ್ತು ಕಾರಿನ ಫ್ಯಾನ್ಸಿ ನಂಬರ್

4578009

ತಿರುವನಂತಪುರಂ: ಪೋರ್ಬ್ಸ್ ಇಂಡಿಯಾ 2016 ರ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ, ಎಂ.ಎ. ಯೂಸೂಫ್ ಅಲಿ, ಕೇವಲ 2000 ರೂಪಾಯಿಗೆ ಕಾರಿನ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ.

ಕೇರಳದ ಲುಲು ಕಂಪನಿಯ ನಿರ್ದೇಶಕ ಯೂಸೂಫ್ ಅಲಿ, ಕೆ.ಎಲ್.01 ಸಿ.ಎ.01 ನಂಬರ್ ಅನ್ನು ಹರಾಜಿನಲ್ಲಿ ಕೇವಲ 2000 ರೂಪಾಯಿಗೆ ಪಡೆದುಕೊಂಡಿದ್ದಾರೆ.

ಸಾರಿಗೆ ಇಲಾಖೆ ಈ ನಂಬರ್ ಗೆ ಹೆಚ್ಚಿನ ಆದಾಯ ನಿರೀಕ್ಷೆ ಮಾಡಿತ್ತು. ಆದರೆ, ಮಧ್ಯವರ್ತಿಗಳ ಕೈವಾಡದಿಂದಾಗಿ ಕೇವಲ 3 ಮಂದಿಯಷ್ಟೇ ಬಿಡ್ ನಲ್ಲಿ ಭಾಗವಹಿಸಿದ್ದರೆನ್ನಲಾಗಿದೆ.

ಮುಂದಿನ ದಿನಗಳಲ್ಲಿ ಇ-ಹರಾಜು ನಡೆಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಕೆ.ಎಲ್. 01 ಬಿ.ಎಕ್ಸ್. ಬರೋಬ್ಬರಿ 10 ಲಕ್ಷ ರೂಪಾಯಿಗೆ, ಕೆ.ಎಲ್. 01 ಬಿ.ವೈ ನಂಬರ್ 7.5 ಲಕ್ಷ ರೂ.ಗೆ ಹಾಗೂ ಕೆ.ಎಲ್. 01 ಬಿ.ಝಡ್ 6000 ರೂ.ಗೆ ಮಾರಾಟವಾಗಿದೆ.

ಆದರೆ, ಯೂಸೂಫ್ ಅವರಿಗೆ 2000 ರೂ.ಗೆ ಫ್ಯಾನ್ಸಿ ನಂಬರ್ ಸಿಕ್ಕಿದೆ. ಅವರೊಂದಿಗೆ ಭಾಗವಹಿಸಿದ್ದವರು 1000 ರೂ., 1500 ರೂ.ಗೆ ಬಿಡ್ ಮಾಡಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...