alex Certify
ಕನ್ನಡ ದುನಿಯಾ       Mobile App
       

Kannada Duniya

ಯೂಟ್ಯೂಬ್ ಗೇಮಿಂಗ್ ಆ್ಯಪ್ ಇನ್ನಿಲ್ಲ

ಆನ್ ಲೈನ್ ಗೇಮಿಂಗ್ ನಲ್ಲಿ ತನ್ನದೇ ಆದ ಛಾಪು‌ ಮೂಡಿಸಿದ್ದ‌ ಯೂಟ್ಯೂಬ್ ಗೇಮಿಂಗ್ ಆ್ಯಪ್ ಇದೀಗ‌ ಯೂಟ್ಯೂಬ್ ಮುಖ್ಯ ವೆಬ್ ಸೈಟ್ ನೊಂದಿಗೆ ವಿಲೀನಗೊಳ್ಳಲು ತಯಾರಾಗಿದೆ.

ಈ ಬಗ್ಗೆ ಅಧಿಕೃತವಾಗಿ ಗೇಮಿಂಗ್ ಆ್ಯಪ್ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ್ದು, ಕೆಲವೇ ದಿನಗಳಲ್ಲಿ ಯೂಟ್ಯೂಬ್ ‌ಮುಖ್ಯ ಆ್ಯಪ್ ನೊಂದಿಗೆ ಗೇಮಿಂಗ್ ಆ್ಯಪ್ ವಿಲೀನಗೊಳಿಸಲಾಗುವುದು. ಮುಂದಿನ ವರ್ಷ ಮಾರ್ಚ್ ನಿಂದ ನಮ್ಮೆಲ್ಲ ಶ್ರಮವನ್ನು ಯೂಟ್ಯೂಬ್ ‌ಮುಖ್ಯ ವೆಬ್ ಸೈಟ್ ಗೆ ಹಾಕಲಾಗುವುದು ಎಂದು ಹೇಳಿದೆ‌.

ಗೇಮಿಂಗ್ ಆ್ಯಪ್ ನ ಈ‌ ನಿರ್ಧಾರಕ್ಕೆ ಪ್ರಮುಖವಾಗಿ, ಮುಂದಿನ ದಿನದಲ್ಲಿ ಇನ್ನಷ್ಟು ಜನರಿಗೆ ತಲುಪುವ ಉದ್ದೇಶ ಹೊಂದಿದೆ‌. ವಿಶ್ವದೆಲ್ಲೆಡೆ ಯೂಟ್ಯೂಬ್ ಭಾರಿ ಜನಪ್ರಿಯತೆ ಪಡೆದಿದೆ‌‌. ಇದೇ ವೇದಿಕೆಯಲ್ಲಿ ಗೇಮಿಂಗ್ ಆ್ಯಪ್ ದೊರೆತರೆ ಇನ್ನು ಹೆಚ್ಚಿನ ಜನರನ್ನು, ಆ್ಯಪ್ ನತ್ತ ಆಕರ್ಷಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಯೂಟ್ಯೂಬ್ ನಿರ್ದೇಶಕ ಕ್ರಿಸ್ಟನಿಯಾ ಪ್ರತಿಕ್ರಿಯಿಸಿದ್ದು, ಗೇಮಿಂಗ್ ಆ್ಯಪ್ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಯೂಟ್ಯೂಬ್ ‌ಮುಖ್ಯ ವೆಬ್ ನೊಂದಿಗೆ ಇದನ್ನು ಸೇರಿಸುವುದರಿಂದ ಮತ್ತಷ್ಟು ಜನರಿಗೆ ತಲುಪಲು ಸಹಾಯವಾಗುತ್ತದೆ. ಯೂಟ್ಯೂಬ್ ನಲ್ಲಿ 200 ಮಿಲಿಯನ್ ಗೇಮರ್ ಗಳು ವೀಕ್ಷಿಸುತ್ತಿದ್ದು, 50. ಬಿಲಿಯನ್ ಗೇಮಿಂಗ್ ಕಂಟೆಂಟ್ ಕಳೆದ ವರ್ಷದಲ್ಲಿ ಬಂದಿದೆ‌. ಆದ್ದರಿಂದ ಇದನ್ನು ಮತ್ತಷ್ಟು ಉತ್ತಮಗೊಳಿಸುವುದರಿಂದ, ವಿಲೀನಗೊಳಿಸಲಾಗುತ್ತಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...