alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಗಲಿದೆ ಟಿವಿ, ವಾಷಿಂಗ್‌ ಮೆಶೀನ್‌…!

ನವದೆಹಲಿ: ಸ್ವದೇಶಿ ಉತ್ಪನ್ನ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಆಮದು ವಸ್ತುಗಳ ಮೇಲಿನ ಸುಂಕ ಹೆಚ್ಚಳಕ್ಕೆ ಮುಂದಾಗಿದೆ.

ಕೇಂದ್ರದ ಈ ನಡೆಯಿಂದ ಟಿವಿ, ವಾಷಿಂಗ್‌ ಮೆಶೀನ್‌, ಫ್ರಿಡ್ಜ್, ಎಸಿ ಮೊದಲಾದ ಆಮದು ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಸೆಪ್ಟೆಂಬರ್‌ 18ರಿಂದಲೇ ಆಮದು ಸುಂಕ ಹೆಚ್ಚಳವಾಗಲಿದೆ. ಅಮೆರಿಕದಿಂದ ಭಾರತಕ್ಕೆ ಆಮದಾಗುವ 29 ಉತ್ಪನ್ನಗಳ ಮೇಲೆ ಹಾಗೂ ಬಾದಾಮಿ, ವಾಲ್ನಟ್‌, ಆಹಾರ ಧಾನ್ಯಗಳಲ್ಲಿಯೂ ಆಮದು ಸುಂಕ ಹೆಚ್ಚಲಿದೆ.

ಎಲೆಕ್ಟ್ರಾನಿಕ್ಸ್‌ ಮತ್ತು ಟೆಲಿಕಾಂ ವಲಯದ ಉತ್ಪನ್ನಗಳಿಗೂ ಸ್ವದೇಶಿ ಉತ್ಪಾದನೆಗೆ ಉತ್ತೇಜನ ನೀಡುವ ಸಲುವಾಗಿ ಇಂಥ ಕ್ರಮದ ಅಗತ್ಯ ಇದೆ ಎಂಬುದು ಸರಕಾರಿ ಅಧಿಕಾರಿಗಳ ಅಭಿಪ್ರಾಯ. ಪ್ರತಿ ವರ್ಷ 200 ಕೋಟಿ ಡಾಲರ್‌ (13,600 ಕೋಟಿ ರೂ.) ಮೌಲ್ಯದ ವಾಷಿಂಗ್‌ ಮೆಶೀನ್‌, ಎಸಿ, ಟಿವಿ, ರೆಫ್ರಿಜರೇಟರ್‌ ಇತ್ಯಾದಿಗಳು ಆಮದಾಗುತ್ತವೆ. ಸ್ಥಳೀಯ ಕಂಪನಿಗಳು ಶೇ.20ರಷ್ಟು ಆಮದು ಸುಂಕಕ್ಕೆ ಲಾಬಿ ನಡೆಸುತ್ತಿವೆ. ಹೀಗಾಗಿ ಸರ್ಕಾರದ ಕ್ರಮ ಉತ್ತಮವಾದುದು ಎಂದು ಹೇಳಲಾಗುತ್ತಿದೆ.

ಆಮದನ್ನು ತಗ್ಗಿಸಲು ಸರಕಾರ ತೆಗೆದುಕೊಂಡಿರುವ ಈ ಕ್ರಮ ಸ್ವಾಗತಾರ್ಹವೇನೋ ಸರಿ. ಆದರೆ ತಾತ್ಕಾಲಿಕವಾಗಿ ಗ್ರಾಹಕರ ಮೇಲೆ ಬೀಳಲಿರುವ ಹೊರೆ ತಪ್ಪಿಸುವವರು ಯಾರು ಎಂಬುದು ಪ್ರಶ್ನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...