alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಠೇವಣಿ: ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಠೇವಣಿಗಳ ಸಂಗ್ರಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಠೇವಣಿ ಬಡ್ಡಿ ದರವನ್ನು ಶೀಘ್ರವೇ ಏರಿಕೆ ಮಾಡುವ ನಿರೀಕ್ಷೆ ಇದೆ.

ಗ್ರಾಹಕರ ನಿಶ್ಚಿತ ಠೇವಣಿಗಳಿಗೆ ನೀಡುವ ಬಡ್ಡಿದರವನ್ನು ಏರಿಕೆ ಮಾಡಲು ಬ್ಯಾಂಕ್ ಗಳು ಚಿಂತಿಸಿವೆ. ಸಾಲದ ಬೇಡಿಕೆ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ಬ್ಯಾಂಕ್ ಗಳು ಠೇವಣಿ ಮೇಲಿನ ಬಡ್ಡಿ ದರವನ್ನು ಏರಿಸುವ ಒತ್ತಡದಲ್ಲಿವೆ.

ಡಿಸೆಂಬರ್ 22 ರ ವೇಳೆಗೆ ಸಾಲಗಳು 81 ಲಕ್ಷ ಕೋಟಿ ರೂ.ಗೆ ಏರಿದೆ. ಇದೇ ಅವಧಿಗೆ ಶೇ. 4.7 ರ ಪ್ರಗತಿ ದಾಖಲಿಸಿದೆ. ಸಾಲಕ್ಕೆ ಬೇಡಿಕೆ ಹೆಚ್ಚಾಗ್ತಿದೆ. ಆದರೂ, ಠೇವಣಿಗಳ ಸಂಗ್ರಹ ಕೇವಲ ಶೇ. 4 ರಷ್ಟು ಮಾತ್ರ ವೃದ್ಧಿಸಿದೆ. ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿದರೆ ಹೂಡಿಕೆ ಜಾಸ್ತಿಯಾಗುವುದರಿಂದ ಸಾಲ ವಿತರಿಸಲು ಬ್ಯಾಂಕ್ ಗಳಿಗೆ ಸುಲಭವಾಗುತ್ತದೆ. ಈ ಕಾರಣದಿಂದ ಠೇವಣಿಗಳ ಮೇಲಿನ ಬಡ್ಡಿಯನ್ನು ಏರಿಕೆ ಮಾಡಲು ಬ್ಯಾಂಕ್ ಗಳು ಮುಂದಾಗಿವೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...