alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ದುಬಾರಿಯಾಗಲಿದೆ ವಿಮಾನ ಪ್ರಯಾಣ

ವಿಮಾನ ಕಂಪನಿಗಳು ಟಿಕೆಟ್ ದರವನ್ನು ಕಡಿಮೆ ಮಾಡ್ತಿವೆ. ಇನ್ಮುಂದೆ ಮತ್ತೆ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ. ಭದ್ರತಾ ಶುಲ್ಕದ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿಯಾಗಲಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಭದ್ರತಾ ಶುಲ್ಕವಾಗಿ 130 ರೂಪಾಯಿ ಪಾವತಿ ಮಾಡಬೇಕಿತ್ತು. ಇನ್ಮುಂದೆ ಇದ್ರಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

ಭದ್ರತೆ ಹೆಸರಿನಲ್ಲಿ ಪ್ರಯಾಣಿಕರಿಂದ ವಸೂಲಿ ಮಾಡ್ತಿರುವ ಶುಲ್ಕ ತುಂಬಾ ಕಡಿಮೆ. ಇದನ್ನು ಹೆಚ್ಚಿಸಬೇಕೆಂದು ವಿಮಾನ ನಿಲ್ದಾಣದ ನಿರ್ವಾಹಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಗಾಗಿ ಶುಲ್ಕ ಶೇಕಡಾ 50 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಶುಲ್ಕದ ಹಣವನ್ನು ಸಿಐಎಸ್ಎಫ್ ಸಿಬ್ಬಂದಿಗೆ ಸಂಬಳವಾಗಿ ನೀಡಲಾಗುತ್ತದೆ. ಅನೇಕ ಕಡೆ ರಾಜ್ಯ ಪೊಲೀಸ್ ಸಿಬ್ಬಂದಿ ಸಂಬಳವನ್ನು ಈ ಶುಲ್ಕದಿಂದ ನೀಡಲಾಗುತ್ತದೆ.

ಈ ಸುರಕ್ಷತೆಗಾಗಿ ಸುಮಾರು 900 ಕೋಟಿ ಖರ್ಚಾಗುತ್ತದೆ. ವಿಮಾನ ನಿಲ್ದಾಣ ನಿರ್ವಾಹಕ ಸಂಸ್ಥೆಗೆ ಇದ್ರಿಂದ 100 ಕೋಟಿ ರೂಪಾಯಿ ನಷ್ಟವಾಗ್ತಿದೆ. ಹಾಗಾಗಿ ಶುಲ್ಕ ಏರಿಕೆ ಪ್ರಸ್ತಾವ ಇಡಲಾಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. 130 ರೂಪಾಯಿ ಭದ್ರತಾ ಶುಲ್ಕ ದೊಡ್ಡ ಮೊತ್ತವಲ್ಲ. ಆದ್ರೆ ವಿಮಾನವನ್ನು ಹತ್ತಿರದಿಂದಲೂ ನೋಡಲು ಸಾಧ್ಯವಾಗದ ಜನರಿಗೆ ಈ ಮೊತ್ತ ದುಬಾರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...