alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಗಳಿಗೆ ಆರ್.ಬಿ.ಐ. ನೀಡಿದೆ ಈ ಮಹತ್ವದ ಸೂಚನೆ

ಡಿಜಿಟಲ್ ವಹಿವಾಟಿನ ಮೂಲಕ ನಗದು ಮುಕ್ತ ವ್ಯಾಪಾರದತ್ತ ಇಡೀ ವ್ಯವಸ್ಥೆಯನ್ನ ಮುನ್ನಡೆಸೋಕೆ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿದೆ. ಈ ಮೂಲಕ ಭಾರತದಲ್ಲಿ ಕ್ಯಾಶ್ ಲೆಸ್ ವ್ಯವಹಾರವನ್ನ ಮಾಡೋದಕ್ಕೆ ಪ್ರೇರಣೆಯನ್ನು ನೀಡಲಾಗ್ತಿದೆ. ಈ ಸಂಬಂಧ ಈಗಾಗ್ಲೇ ಡಿಜಿಟಲ್ ವಹಿವಾಟಿನ ಭಾಗವಾದ ವರ್ಚುವಲ್ ಕರೆನ್ಸಿ ಮತ್ತು ಗೂಢಲಿಪೀಕರಣ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ,

ಆರ್ಬಿಐನ ಮಾರ್ಗದರ್ಶನದಲ್ಲಿ 2018ರ ಏಪ್ರಿಲ್ ನಲ್ಲೇ ಕ್ಯಾಶ್ಲೆಸ್ ವಹಿವಾಟಿನ ಸಾಧಕ ಬಾಧಕಗಳ ಪರೀಕ್ಷಾ ಮತ್ತು ಅಧ್ಯಯನ ವರದಿ ನೀಡೋದಕ್ಕೆ ಕಮಿಟಿಯೊಂದನ್ನ ರಚಿಸಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಡಿಜಿಟಲ್ ವ್ಯವಹಾರ ಯಾವ ರೀತಿಯ ಪರಿಣಾಮ ಬೀರಬಹುದು ಅನ್ನೋದ್ರ ಬಗ್ಗೆ ಕಮಿಟಿ ಈಗಾಗ್ಲೇ ವರದಿ ತಯಾರಿಸಿದೆ ಅಂತ ಹೇಳಲಾಗ್ತಿದೆ.

ಡಿಜಿಟಲ್ ವಹಿವಾಟು ಜಾರಿಗೊಳಿಸಿದ್ರೆ ಬ್ಯಾಂಕ್ ನ ಠೇವಣಿ ಹೂಡಿಕೆ ಮತ್ತು ಹಿಂಪಡೆಯುವಲ್ಲಿ ಏನಾದ್ರು ಬದಲಾವಣೆಗಳು ಆಗಬಹುದಾ ಅನ್ನೋದನ್ನ ಪರೀಕ್ಷೆ ನಡೆಸೋಕೆ ಆರ್ಬಿಐ ದೇಶದ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆಯಂತೆ. ಆ ಪ್ರಕಾರ ಏಪ್ರಿಲ್ 6ರಿಂದ ಮೂರು ತಿಂಗಳ ಕಾಲ ಡಿಜಿಟಲ್ ವಹಿವಾಟು ಜಾರಿಗೊಳಿಸಿದ ನಂತರದಲ್ಲಿ ಕೆಲ ಹಣ ಹೂಡಿಕೆಯ ಹರಿವು ಕಡಿಮೆಯಾಗಿದೆಯಂತೆ. ಜುಲೈ ಆರರಿಂದ ಕ್ರಿಪ್ಟೋ ಕರೆನ್ಸಿ ಎಕ್ಸ್ ಚೇಂಜ್ ಪ್ರಕ್ರಿಯೆಯಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆಯಂತೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಬಗ್ಗೆ ಆರ್ಬಿಐನಿಂದ ಅಂತಿಮ ಮಾರ್ಗದರ್ಶಕ ಸೂತ್ರಗಳು ಜಾರಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಆರ್ಬಿಐ ಮತ್ತು ಸೆಬಿ ವಲಯದ ಠೇವಣಿದಾರರ ಜೊತೆ ಅಂತಿಮ ಹಂತದ ಮಾತುಕತೆಗಳನ್ನ ನಡೆಸುತ್ತಿದೆ. ಸದ್ಯ ಆರ್ಬಿಐನ ಮೇಲ್ವಿಚಾರಣಾ ಕಮಿಟಿ ಗ್ರಾಹಕರು, ಹೂಡಿಕೆದಾರರು, ಮತ್ತು ವ್ಯಾಪಾರಿಗಳಿಗೆ ವರ್ಚುವಲ್ ಕರೆನ್ಸಿ ಬಳಕೆಯ ಅಂತಿಮ ಹಂತದ ಪರೀಕ್ಷೆಗಳನ್ನು ನಡೆಸುತ್ತಿದೆಯಂತೆ. ತನ್ನ ಸೂತ್ರಗಳನ್ನ ಮೀರಿ ಯಾವುದೇ ವಹಿವಾಟು ನಡೆಸದಂತೆ ಬ್ಯಾಂಕ್ ಗಳಿಗೆ ಆರ್ಬಿಐ ಸ್ಪಷ್ಟ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...