alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಅತಿ ಕಡಿಮೆ ಬೆಲೆಗೆ ಬಂಗಾರ ಮಾರಾಟ ಮಾಡ್ತಿದೆ ಎಸ್.ಬಿ.ಐ.

ಹಬ್ಬದ ಋತುವಿನಲ್ಲಿ ಬಂಗಾರ-ಬೆಳ್ಳಿಗೆ ಬೇಡಿಕೆ ಹೆಚ್ಚು. ಬಂಗಾರದ ಬೇಡಿಕೆ ಹೆಚ್ಚಾಗ್ತಿದ್ದಂತೆ ಬೆಲೆಯಲ್ಲೂ ಏರಿಕೆ ಕಂಡು ಬರುತ್ತದೆ. ಕಳೆದ ಆರು ವರ್ಷಗಳಲ್ಲಿ ಈ ವರ್ಷ ಬಂಗಾರದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಬಂಗಾರ ಗಗನಕ್ಕೇರಿದ್ದು, ಖರೀದಿದಾರರ ಸಂಖ್ಯೆ ಇಳಿದಿದೆ.

ಎಸ್.ಬಿ.ಐ. ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ಬಂಗಾರ ನೀಡಲು ಸರ್ಕಾರ ಮುಂದಾಗಿದೆ. ಎಸ್.ಬಿ.ಐ. ಅಧಿಕೃತ ಟ್ವೀಟರ್ ನಲ್ಲಿ ಈ ಬಾಂಡ್ ಬಗ್ಗೆ ಮಾಹಿತಿ ನೀಡಿದೆ. ಗೋಲ್ಡ್ ಬಾಂಡ್ ಯೋಜನೆ ನವೆಂಬರ್ 5ರಿಂದ ಶುರುವಾಗಿದ್ದು, ನವೆಂಬರ್ 9ರವರೆಗಿರಲಿದೆ.

ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲರಿ ಅಸೋಸಿಯೇಷನ್ ನಿರ್ಧಾರ ಮಾಡಿದ ಬೆಲೆಗೆ ಶೇಕಡಾ 99.9ರಷ್ಟು ಶುದ್ಧ ಚಿನ್ನ ಮಾರಾಟವಾಗಲಿದೆ. ಆದ್ರೆ ಆನ್ಲೈನ್ ನಲ್ಲಿ ಬಾಂಡ್ ಖರೀದಿ ಮಾಡುವ ಹಾಗೂ ಹಣ ಪಾವತಿ ಮಾಡುವ ಗ್ರಾಹಕರಿಗೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ಸಿಗಲಿದೆ.

ಈ ಬಾಂಡನ್ನು ಬ್ಯಾಂಕ್, ಬ್ಯಾಂಕ್ ಹೋಲ್ಡಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಅಂಚೆ ಕಚೇರಿಯಲ್ಲಿ ಖರೀದಿ ಮಾಡಬಹುದಾಗಿದೆ. 8 ವರ್ಷಗಳ ನಂತ್ರ ಬಾಂಡ್ ಮಾರಾಟ ಮಾಡಿ ಹಣ ಪಡೆಯಬಹುದಾಗಿದೆ. ಡಿಡಿ, ಚೆಕ್ ಅಥವಾ ಆನ್ಲೈನ್ ಮೂಲಕ ಬಾಂಡ್ ಖರೀದಿ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...