alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಿಎಂ ಮೂಲಕ ಪೆಟ್ರೋಲ್ ಪೇಮೆಂಟ್ ಮಾಡಿದ್ರೆ 7500 ರೂ.ವರೆಗೆ ಕ್ಯಾಶ್ ಬ್ಯಾಕ್

ವಾಹನ ಇದ್ಮೇಲೆ ಪೆಟ್ರೋಲ್-ಡಿಸೇಲ್ ಹಾಕಿಸಲೇಬೇಕು. ಕಾರ್ ಅಥವಾ ಬೈಕ್ ಗೆ ಪೆಟ್ರೋಲ್ ಹಾಕಿದ್ಮೇಲೆ ಕ್ಯಾಶ್ ಬ್ಯಾಕ್ ಸಿಗುತ್ತೆ ಅಂದ್ರೆ ಯಾರು ಬೇಡ ಅಂತಾರೆ. ಅದೂ 7500 ರೂಪಾಯಿಯಷ್ಟು ಕ್ಯಾಶ್ ಬ್ಯಾಕ್ ಸಿಗತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ.

ಯಸ್. ಪೆಟ್ರೋಲ್ ತುಂಬಿಸಿದ ನಂತ್ರ ಪೇಟಿಎಂ ಮೂಲಕ ಹಣ ಪಾವತಿ ಮಾಡಿದ್ರೆ ನಿಮಗೆ ಕ್ಯಾಶ್ ಬ್ಯಾಕ್ ಸಿಗಲಿದೆ. ಆಗಸ್ಟ್ 1 ರಿಂದಲೇ ಪೇಟಿಎಂ ಈ ಸೇವೆ ಶುರು ಮಾಡಿದ್ದು ಜನವರಿ 1,2019 ರವರೆಗೆ ನೀವು ಕ್ಯಾಶ್ ಬ್ಯಾಕ್ ಲಾಭ ಪಡೆಯಬಹುದಾಗಿದೆ. ಪ್ರತಿ ಬಾರಿ 50 ರೂಪಾಯಿಗಿಂತ ಹೆಚ್ಚು ವ್ಯವಹಾರ ನಡೆಸಿದ್ರೆ ಮಾತ್ರ ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತೆ ಅನ್ನೋದು ನೆನಪಿರಲಿ.

ದಿನದಲ್ಲಿ ಅನೇಕ ಬಾರಿ ಪೆಟ್ರೋಲ್ ತುಂಬಿಸಿ ಪೇಟಿಎಂನಲ್ಲಿ ಹಣ ಸಂದಾಯ ಮಾಡಿದ್ರೆ ಮೊದಲ ವ್ಯವಹಾರಕ್ಕೆ ಮಾತ್ರ ಪೇಟಿಎಂ ಕ್ಯಾಶ್ ಬ್ಯಾಕ್ ನೀಡಲಿದೆ. ವ್ಯವಹಾರ ನಡೆದ 48 ಗಂಟೆಯಲ್ಲಿ ಪೇಟಿಎಂ ವಾಲೆಟ್ ಗೆ ಕ್ಯಾಶ್ ಬ್ಯಾಕ್ ಬರಲಿದೆ.

ಮೊದಲ ಬಾರಿ ಪೆಟ್ರೋಲ್ ಬಂಕ್ ನಲ್ಲಿ ಪೇಟಿಎಂ ಮೂಲಕ ಹಣ ಸಂದಾಯ ಮಾಡಿದ್ರೆ 50 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ. ಪೇಟಿಎಂ ಪೇಮೆಂಟ್ ಬ್ಯಾಂಕ್ ಬಳಸಿದ್ದರೆ 10 ರೂಪಾಯಿ ಹೆಚ್ಚುವರಿ ಕ್ಯಾಶ್ ಬ್ಯಾಕ್ ಸಿಗಲಿದೆ. ಎರಡನೇ ಬಾರಿ ಸಿನಿಮಾ ಟಿಕೆಟ್ ಮೇಲೆ 100 ರೂಪಾಯಿ ರಿಯಾಯಿತಿ ಸಿಗಲಿದೆ. ಮೂರನೇ ಬಾರಿ Oyoನಲ್ಲಿ 350 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ. ನಾಲ್ಕನೇ ಬಾರಿ ಡಿಟಿಹೆಚ್ ರಿಚಾರ್ಜ್ ಮೇಲೆ 25 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.

ಹತ್ತನೇ ಬಾರಿ ಪೆಟ್ರೋಲ್ ಬಂಕ್ ನಲ್ಲಿ  ಪೇಟಿಎಂ ಮೂಲಕ ಹಣ ಸಂದಾಯ ಮಾಡಿದ್ರೆ 1350 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ. ನಂತ್ರ ಪ್ರತಿ 10 ಬಾರಿಯೂ 1350 ರೂಪಾಯಿಯಂತೆ ಕ್ಯಾಶ್ಬ್ಯಾಕ್ ಸಿಗಲಿದೆ. https://paytm.com/offer/petrol-pump-offers ನಲ್ಲಿ ಈ ಬಗ್ಗೆ ಎಲ್ಲ ಮಾಹಿತಿ ಲಭ್ಯವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...