alex Certify
ಕನ್ನಡ ದುನಿಯಾ       Mobile App
       

Kannada Duniya

1,388 ರೂಪಾಯಿಗೆ ಸಿಗ್ತಿದೆ 13,499 ರೂ. ನೋಕಿಯಾ 6 ಸ್ಮಾರ್ಟ್ಫೋನ್

ಹಿಂದಿನ ವರ್ಷ ಮಾರುಕಟ್ಟೆಗೆ ಬಂದು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೋಕಿಯಾ 6 ಫೋನ್ ಕೇವಲ 1388 ರೂಪಾಯಿಗೆ ಗ್ರಾಹಕರಿಗೆ ಸಿಗ್ತಿದೆ. ಸಾಕಷ್ಟು ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಬಂದ ಹೆಚ್ ಎಂ ಡಿ ಕಂಪನಿಯ ನೋಕಿಯಾ 6 ಮಧ್ಯಮ ಶ್ರೇಣಿ ವಿಭಾಗದಲ್ಲಿತ್ತು. ಕೆಲ ದಿನಗಳ ಹಿಂದಷ್ಟೇ ಅಮೆಜಾನ್ ನೋಕಿಯಾ 6 ಬೆಲೆಯಲ್ಲಿ ಇಳಿಕೆ ಮಾಡಿತ್ತು. ಈಗ ಈ ಫೋನ್ ಕೇವಲ 1388 ರೂಪಾಯಿಗೆ ಸಿಗಲಿದೆ.

ಅಮೆಜಾನ್ ಇಂಡಿಯಾದಲ್ಲಿ ಈಗ ನೋಕಿಯಾ 6 ಮೇಲೆ ಶೇಕಡಾ 22ರಷ್ಟು ರಿಯಾಯಿತಿ ಸಿಗ್ತಿದೆ. ಅಂದ್ರೆ ನಿಮಗೆ 3700 ರೂಪಾಯಿ ಲಾಭವಾಗಲಿದೆ. ಹೊಸ ನೋಕಿಯಾ 6 ಫೋನ್ ಖರೀದಿ ಮಾಡಲು ನೀವು 13499 ರೂಪಾಯಿ ಖರ್ಚು ಮಾಡಬೇಕು. ಅಮೆಜಾನ್ ಇಂಡಿಯಾ ವಿನಿಮಯ ರಿಯಾಯಿತಿ ಕೂಡ ನೀಡ್ತಿದೆ.

ಅಮೆಜಾನ್ ನೋಕಿಯಾ 6 ಮೇಲೆ 12,111 ರೂಪಾಯಿ ವಿನಿಮಯ ರಿಯಾಯಿತಿ ನೀಡ್ತಿದೆ. ಅಂದ್ರೆ ಹಳೆ ಫೋನ್ ಬದಲಾಯಿಸಿ ಹೊಸ ನೋಕಿಯಾ 6 ಫೋನ್ ಖರೀದಿ ಮಾಡಿದ್ರೆ ಅಮೆಜಾನ್ ನಲ್ಲಿ ನಿಮಗೆ ಹೊಸ ಫೋನ್ 1388 ರೂಪಾಯಿಗೆ ಸಿಗಲಿದೆ. ನೋಕಿಯಾ 6 ಖರೀದಿ ಮಾಡಲು ನೀವು OnePlus 5 ನಂತ ಸ್ಮಾರ್ಟ್ಫೋನ್ ವಿನಿಮಯ ಮಾಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...