alex Certify
ಕನ್ನಡ ದುನಿಯಾ       Mobile App
       

Kannada Duniya

ಯಮಹಾದ ಹೊಸ ಬೈಕ್ ವಿಶಿಷ್ಟತೆಯೇನು..?

yamaha-fazer-250

ಬೈಕ್ ಪ್ರಿಯರ ಬಹುನಿರೀಕ್ಷಿತ ಯಮಹಾ ಫೇಜರ್ 250 ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಜಪಾನ್ ಮೂಲದ ಯಮಹಾ ಕಂಪನಿ ಆಗಸ್ಟ್ 21ರಂದು ಪತ್ರಿಕಾಗೋಷ್ಠಿ ಕರೆದಿದ್ದು, ಅಂದೇ ಯಮಹಾ ಫೇಜರ್ 250 ಬೈಕ್ ಲಾಂಚ್ ಮಾಡುವ ನಿರೀಕ್ಷೆ ಇದೆ.

ಯಾಕಂದ್ರೆ ಹಬ್ಬಗಳ ಸೀಸನ್ ಗೂ ಮುನ್ನವೇ ಬೈಕ್ ಅನ್ನು ಭಾರತದ ರಸ್ತೆಗಿಳಿಸಲು ಕಂಪನಿ ಪ್ಲಾನ್ ಮಾಡಿತ್ತು. ಸದ್ಯ ಮಾರುಕಟ್ಟೆಯಲ್ಲಿರುವ ಯಮಹಾ FZ25ನ ಹೊಸ ವರ್ಷನ್ ಇದು. ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬರ್ತಿದೆ. ಹಗಲಲ್ಲೂ ರನ್ ಆಗಬಲ್ಲ ಹೊಸ ಎಲ್ ಇ ಡಿಯನ್ನು ಕೂಡ ಅಳವಡಿಸಲಾಗಿದೆ.

ಹೊಸದಾಗಿ ವಿಂಡ್ ಶೀಲ್ಡ್ ಅನ್ನು ಅಳವಡಿಸಲಾಗಿದೆ. ಪ್ಲಶ್ ಸಸ್ಪೆನ್ಷನ್ ಸಿಸ್ಟಮ್, ಸೀಟ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಬೈಕ್ ನ ಬೆಲೆ FZ25ಗಿಂದ 5000-10000 ರೂಪಾಯಿ ಅಧಿಕವಾಗಿರಬಹುದು ಅಂತಾ ಅಂದಾಜಿಸಲಾಗಿದೆ. ಸದ್ಯ FZ25 ಬೈಕ್ ಗೆ ದೆಹಲಿಯಲ್ಲಿ 1.19 ಲಕ್ಷ ರೂಪಾಯಿ ಇದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...