alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ Xiaomi ಬಿಡುಗಡೆ ಮಾಡ್ತು ಎಲ್ಇಡಿ ಟಿವಿ

Xiaomi ಬುಧವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೆಡ್ ಮಿ ನೋಟ್ 5 ಹಾಗೂ ನೋಟ್ 5 ಪ್ರೋ ಜೊತೆ 55 ಇಂಚಿನ ಮಿ ಟಿವಿ 4 ಬಿಡುಗಡೆ ಮಾಡಿದೆ. ಕಂಪನಿ ಭಾರತದಲ್ಲಿ ಈ ಟಿವಿ ಬೆಲೆಯನ್ನು 39,999 ರೂಪಾಯಿ ನಿಗದಿಪಡಿಸಿದೆ. ನಾಣ್ಯದಷ್ಟು ಸ್ಲಿಮ್ ಆಗಿರುವುದು ಇದರ ವಿಶೇಷ.

ಕಂಪನಿ ಪ್ರಕಾರ ಇದು ವಿಶ್ವದ ಅತ್ಯಂತ ಸ್ಲಿಮ್ ಎಲ್ಇಡಿ ಟಿವಿಯಂತೆ. ಈ ಟಿವಿ ಬಿಡುಗಡೆ ಮಾಡುವ ಮೂಲಕ Xiaomi ಭಾರತದ ಟಿವಿ ಕ್ಷೇತ್ರಕ್ಕೂ ಕಾಲಿಟ್ಟಿದೆ. Xiaomi ಭಾರತದಲ್ಲಿ 55 ಇಂಚಿನ ಒಂದೇ ರೂಪಾಂತರದ ಟಿವಿಯನ್ನು ಬಿಡುಗಡೆ ಮಾಡಿದೆ.

ಗ್ರಾಹಕರಿಗೆ ಫೆಬ್ರವರಿ 22ರ ನಂತ್ರ ಫ್ಲಿಪ್ಕಾರ್ಟ್ ನಲ್ಲಿ ಮಿ ಟಿವಿ 4 ಲಭ್ಯವಾಗಲಿದೆ. ಮಿ ಟಿವಿ 4, 4.9 ಮಿಮಿ ಮಾಪನದಲ್ಲಿದೆ. ಇದ್ರಲ್ಲಿ 8ಜಿಬಿ ಸ್ಟೋರೇಜ್ ಜೊತೆ 2ಜಿಬಿ ರ್ಯಾಮ್ ಅಳವಡಿಸಲಾಗಿದೆ. ಕನೆಕ್ಟಿವಿಟಿಗಾಗಿ 3 HDMI 2.0 ಪೋರ್ಟ್, ಯುಎಸ್ಬಿ ಪೋರ್ಟ್, Ethernet ಪೋರ್ಟ್, S/PDIF ಪೋರ್ಟ್ ಹಾಗೂ Wi-Fi 802.11ac ಮತ್ತು Bluetooth 4.0 ಸಪೋರ್ಟ್ ಮಾಡಲಿದೆ ಮಿ ಟಿವಿ 4.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...