alex Certify
ಕನ್ನಡ ದುನಿಯಾ       Mobile App
       

Kannada Duniya

ಇಳಿಕೆಯಾಯ್ತು ದುಬಾರಿ ಮೊಬೈಲ್ ನ ದರ

xiomi mi phoneಭಾರತದ ಮಾರುಕಟ್ಟೆಗೆ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದ ತನ್ನ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ದರವನ್ನು ಕ್ಸಿಯಾಮಿ ಕಡಿತಗೊಳಿಸಿದೆ. ಮತ್ತೊಂದು ಪ್ರತಿಸ್ಪರ್ಧಿ ಕಂಪನಿ ಸ್ಯಾಮ್ ಸಂಗ್ ತನ್ನ ಕೆಲ ಮಾಡೆಲ್ ಗಳ ಮೇಲೆ ದರ ಕಡಿತಗೊಳಿಸಿರುವುದರ ಬೆನ್ನಲ್ಲೇ ಕ್ಸಿಯಾಮಿ ಈ ಪ್ರಕಟಣೆ ಹೊರಡಿಸಿದೆ.

ಕ್ಸಿಯಾಮಿ ಇಂಡಿಯಾ ಮುಖ್ಯಸ್ಥ ಮನು ಕುಮಾರ್ ಜೈನ್ ಈ ಕುರಿತು ಟ್ವೀಟ್ ಮಾಡಿದ್ದು, Mi 5 ಮಾಡೆಲ್ ಈಗ 22,999 ರೂ. ಗಳಿಗೆ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಬಿಡುಗಡೆಗೊಂಡ ಸಂದರ್ಭದಲ್ಲಿ ಇದರ ದರ 24,999 ರೂ. ಗಳಾಗಿದ್ದು, ಎರಡು ಸಾವಿರ ರೂ. ಕಡಿತಗೊಂಡಂತಾಗಿದೆ. ಫ್ಲಿಪ್ ಕಾರ್ಟ್ ಹಾಗೂ ಕಂಪನಿಯ ವೆಬ್ ಸೈಟ್ ನಲ್ಲಿ Mi 5 ಬುಕ್ ಮಾಡಿ ಈ ದರದಲ್ಲಿ ಪಡೆಯಬಹುದಾಗಿದೆ ಎಂದು ಮನು ಕುಮಾರ್ ಜೈನ್ ಹೇಳಿದ್ದಾರೆ.

5.15 ಇಂಚು ಫುಲ್ ಹೆಚ್.ಡಿ. ಡಿಸ್ ಪ್ಲೇ, 1920×1080  ಪಿಕ್ಸೆಲ್ ರೆಸಲ್ಯೂಷನ್ ಅನ್ನು Mi 5 ಹೊಂದಿದ್ದು, ಅಂಡ್ರಾಯ್ಡ್ 6.0 Marshmallow ಅಪರೇಟಿಂಗ್ ಸಿಸ್ಟಂ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಕ್ಸಿಯಾಮಿ ಭಾರತದಲ್ಲಿ ಬಿಡುಗಡೆ ಮಾಡಿದ್ದ ಸ್ಮಾರ್ಟ್ ಫೋನ್ ಗಳ ಪೈಕಿ Mi 5 ದುಬಾರಿ ಫೋನ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...