alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿಯ 3 ಲಕ್ಷ ಸ್ಟಾಕ್ 10 ಸೆಕೆಂಡ್ ನಲ್ಲಿ ಸೇಲ್…!

ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ Xiaomi ಭಾರತದಲ್ಲಿ ಇತ್ತೀಚೆಗಷ್ಟೇ ಎರಡು ಸ್ಮಾರ್ಟ್ಫೋನ್ Redmi Note 5 ಮತ್ತು Redmi Note 5 Pro ಬಿಡುಗಡೆ ಮಾಡಿದೆ. ಇದ್ರ ಮೊದಲ ಸೇಲ್ ಫೆಬ್ರವರಿ 22 ರಂದು ನಡೆದಿತ್ತು. Mi.com ಮತ್ತು ಫ್ಲಿಪ್ಕಾರ್ಟ್ ನಲ್ಲಿ ಸೇಲ್ ಆಯೋಜನೆ ಮಾಡಲಾಗಿತ್ತು. ಕೇವಲ 2 ಸೆಕೆಂಡ್ ನಲ್ಲಿ ಎಲ್ಲ ಸ್ಮಾರ್ಟ್ಫೊನ್ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ.

ಸ್ಮಾರ್ಟ್ಫೋನ್ ಜೊತೆ ಕಂಪನಿ Mi TV 4 ಬಿಡುಗಡೆ ಮಾಡಿದ್ದು, ಇದು ಕೇವಲ 10 ಸೆಕೆಂಡ್ ನಲ್ಲಿ ಔಟ್ ಆಫ್ ಸ್ಟಾಕ್ ಆಗಿದೆಯಂತೆ. ರೆಡ್ ಮಿ ನೋಟ್ 5 ಹಾಗೂ ರೆಡ್ ಮಿ ನೋಟ್ 5 ಪ್ರೋ ಮತ್ತು ಮಿ ಟಿವಿ 4ನ 3 ಲಕ್ಷ ಸ್ಟಾಕ್ 10 ಸೆಕೆಂಡ್ ನಲ್ಲಿ ಮಾರಾಟವಾಗಿದೆಯಂತೆ. ಈ ಸೇಲ್ ಭಾರತದ ಮಾರುಕಟ್ಟೆಯಲ್ಲಿ ಅತಿ ದೊಡ್ಡದು ಎಂದು ಕಂಪನಿ ಹೇಳಿದೆ.

ಸೇಲ್ ಶುರುವಾಗ್ತಿದ್ದಂತೆ ಟ್ವೀಟರ್ ನಲ್ಲಿ ಕಮೆಂಟ್ ಗಳು ಬರಲು ಶುರುವಾಗಿದ್ದವು. ಅನೇಕ ಬಳಕೆದಾರರು ಮೋಸ ಮಾಡಬೇಡಿ ಎಂದು ಕಮೆಂಟ್ ಮಾಡಿದ್ದರು. ಸೇಲ್ ಶುರುವಾಗ್ತಿದ್ದಂತೆ ವೆಬ್ ಸೈಟ್ ಹ್ಯಾಕ್ ಆಗಿದ್ದು, ಔಟ್ ಆಫ್ ಸ್ಟಾಕ್ ಎಂದು ತೋರಿಸುತ್ತಿದೆ ಎಂದು ದೂರಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...