alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ಫೋನ್ ಖರೀದಿ ಮಾಡುವವರಿಗೊಂದು ಸಿಹಿ ಸುದ್ದಿ

ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಖರೀದಿ ಮಾಡುವ ಯೋಚನೆ ಮಾಡುತ್ತಿದ್ದರೆ ನಿಮಗೊಂದು ಖುಷಿ ಸುದ್ದಿ. ಚೀನಾ ಕಂಪನಿ xiaomi ತನ್ನ ಪ್ರಸಿದ್ಧ ಫೋನ್ ರೆಡ್ ಮಿ ನೋಟ್ 4 ಬೆಲೆಯನ್ನು ಇಳಿಕೆ ಮಾಡಿದೆ.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಭಾರತದಲ್ಲಿ ರೆಡ್ ಮಿ ನೋಟ್ 4 ಬೆಲೆ ಕಡಿಮೆಯಾಗಿದೆ ಎಂಬ ವಿಷ್ಯವನ್ನು ಸ್ಪಷ್ಟಪಡಿಸಿದ್ದಾರೆ. ದರ ಇಳಿಕೆ ನಂತ್ರ ರೆಡ್ ಮಿ ನೋಟ್ 4 ಎರಡು ರೂಪಾಂತರಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಪ್ರಕಾರ ಫೋನ್ ಬೆಲೆ 1000 ರೂಪಾಯಿ ಇಳಿಕೆಯಾಗಿದೆ. ದರ ಇಳಿಕೆ ನಂತ್ರ 3ಜಿಬಿ ರ್ಯಾಮ್ ನ 32 ಜಿಬಿ ಸ್ಟೋರೇಜ್ ನ ರೆಡ್ ಮಿ ನೋಟ್ 4- 9,999 ರೂಪಾಯಿಗೆ ಸಿಗಲಿದೆ. ಅದೇ 4ಜಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ನ ರೆಡ್ ಮಿ ನೋಟ್ 4- 11,999 ರೂಪಾಯಿಗೆ ಲಭ್ಯವಿದೆ.

ಕಡಿಮೆ ಬೆಲೆಗೆ ರೆಡ್ ಮಿ ನೋಟ್ 4 ಫೋನ್ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ನಲ್ಲಿ ಗ್ರಾಹಕರಿಗೆ ಸಿಗಲಿದೆ. ಎಂಐ ಡಾಟ್ ಕಾಂನಲ್ಲಿ ಕೂಡ ನೀವು ಫೋನ್ ಖರೀದಿ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...