alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ನಡೆಯಲಿದೆ ಒಂದು ರೂಪಾಯಿ ಸೇಲ್

mi_hatmezk

ಸ್ಮಾರ್ಟ್ಫೋನ್ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ ಇದೆ. ಕೇವಲ ಒಂದು ರೂಪಾಯಿಗೆ ರೆಡ್ ಮಿ ನೋಟ್ 4 ಖರೀದಿ ಮಾಡಬಹುದಾಗಿದೆ. ಯಸ್, ಚೀನಾದ ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿ Xiaomi ಏಪ್ರಿಲ್ 6ರಂದು ಭಾರತೀಯ ಗ್ರಾಹಕರಿಗಾಗಿ ಫ್ಯಾನ್ ಫೆಸ್ಟಿವಲ್ ನಡೆಸಲಿದೆ.

ಹಿಂದಿನ ವರ್ಷದಂತೆ ಈ ಬಾರಿಯೂ Mi.com ನಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲಿದೆ. ಇದ್ರಲ್ಲಿ ಒಂದು ರೂಪಾಯಿ ಸೇಲ್ ಕೂಡ ಇರಲಿದೆ. ಲಕ್ಕಿ ಗ್ರಾಹಕರಿಗೆ ಕೇವಲ ಒಂದು ರೂಪಾಯಿಗೆ ಸ್ಮಾರ್ಟ್ಫೋನ್ ಸಿಗಲಿದೆ. ಒಂದು ರೂಪಾಯಿ ಆಫರ್ ಕೇವಲ Xiaomi ಅಪ್ಲಿಕೇಷನ್ ನಲ್ಲಿ ಮಾತ್ರ ಲಭ್ಯವಿದೆ. ಇದಕ್ಕೆ ನಿಮ್ಮ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಏಪ್ರಿಲ್ 6ರಂದು ಬೆಳಿಗ್ಗೆ 10 ಗಂಟೆಗೆ ಸೇಲ್ ಶುರುವಾಗಲಿದೆ. ಮಧ್ಯಾಹ್ನ 2 ಗಂಟೆಗೆ Mi Band 2 ನ 40 ಯುನಿಟ್ ಹಾಗೂ 10,000 mAh ಪವರ್ ಬ್ಯಾಂಕ್ ಯುನಿಟ್ ಸೇಲ್ ಗಿಡಲಾಗುವುದು. ಏಪ್ರಿಲ್ 6 ರಂದು ಮಾತ್ರ ಈ ಸೇಲ್ ಇರಲಿದೆ. ಈ ಸೇಲ್ ನಲ್ಲಿ ಕಂಪನಿ ತನ್ನ ಇತರೇ ಉತ್ಪನ್ನಗಳನ್ನು ಮಾರಾಟ ಮಾಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...