alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ರೆಡ್ ಮಿ 6 ಸರಣಿ

Xiaomi ಬುಧವಾರ ಭಾರತದಲ್ಲಿ ಮೂರು ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಕಂಪನಿಯ ಎಲ್ಲ ಸ್ಮಾರ್ಟ್ಫೋನ್ ರೆಡ್ ಮಿ 6 ಸರಣಿಯದ್ದಾಗಿದ್ದು, ಇಂದು ರೆಡ್ ಮಿ 6, ರೆಡ್ ಮಿ 6ಎ, ರೆಡ್ ಮಿ 6 ಪ್ರೊ ಬಿಡುಗಡೆ ಮಾಡಿದೆ. ಕಳೆದ ವಾರವೇ ಈ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ತಿಳಿಸಿದ್ದರು.

Xiaomi ರೆಡ್ ಮಿ 5ಎ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಮೇಲೆ ಕಂಪನಿ ರೆಡ್ ಮಿ 6ಎ ಬಿಡುಗಡೆ ಮಾಡಿದೆ. ರೆಡ್ ಮಿ 6ಎ 6 ಬಣ್ಣಗಳಲ್ಲಿ ಬಿಡುಗಡೆಯಾಗಿದೆ. 13 ಮೆಗಾ ಪಿಕ್ಸಲ್ ರಿಯರ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಿದೆ. ಇನ್ನು ರೆಡ್ ಮಿ 6 ಮೊಬೈಲ್ 5.45 ಇಂಚಿನ ಸ್ಕ್ರೀನ್ ಹೊಂದಿರಲಿದೆ. ಇದು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ರೆಡ್ ಮಿ 6 ಪ್ರೊ ಕೂಡ ನಾಲ್ಕು ಬಣ್ಣದಲ್ಲಿ ಸಿಗಲಿದೆ. ಇದ್ರಲ್ಲಿ 12 ಮೆಗಾಪಿಕ್ಸಲ್ ರಿಯರ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಲಾಗಿದೆ. ಚೀನಾದಲ್ಲಿ ರೆಡ್ ಮಿ 6 ಮೊಬೈಲ್ ಬೆಲೆ 799 ಯುವಾನ್ ( ಸುಮಾರು 8,400 ರೂ.) ಆಗಿದೆ. ರೆಡ್ ಮಿ 6ಎ ಮೊಬೈಲ್ ಬೆಲೆ 599 ಯುವಾನ್ (ಸುಮಾರು 6,300 ರೂ.) ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...