alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ಪೊಕೊ ಎಫ್ 1 ಮೊಬೈಲ್

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿರುವ Xiaomi ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ಹೊಸ ಮೊಬೈಲ್ ಮೂಲಕ ಕಂಪನಿ ತನ್ನ ಪೊಕೊ ಸರಣಿಯನ್ನು ಭಾರತಕ್ಕೆ ಪರಿಚಯಿಸಿದೆ. ಪೊಕೊ ಎಫ್ 1 ಹೆಸರಿನಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.

ಕೆಲವೇ ದಿನಗಳಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಪೊಕೊ ಎಫ್ 1 ಖರೀದಿಗೆ ಲಭ್ಯವಾಗಲಿದೆ. ಕ್ವಾಡ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸ್ ಬಳಸಲಾಗಿದೆ. ಫೋನ್ ನಲ್ಲಿ ಗ್ರಾಹಕರಿಗೆ ಲಿಕ್ವಿಡ್ಕೂಲ್ ತಂತ್ರಜ್ಞಾನ ಕೂಡ ಸಿಗಲಿದೆ. 6.18 ಹೆಚ್ಡಿಯ ಡಿಸ್ಪ್ಲೇ ಸಿಗಲಿದೆ. 4000 ಎಂಎಎಚ್ ಬ್ಯಾಟರಿ ಅಳವಡಿಸಲಾಗಿದೆ.

12 ಮೆಗಾಪಿಕ್ಸಲ್ ಹಾಗೂ 5 ಮೆಗಾಪಿಕ್ಸಲ್ ಡ್ಯುಯಲ್ ಕ್ಯಾಮರಾ ನೀಡಲಾಗಿದೆ. ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. 6 ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 20,999 ರೂಪಾಯಿ. 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 23,999 ರೂಪಾಯಿ. 8 ಜಿಬಿ ರ್ಯಾಮ್ ಹಾಗೂ 256 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 28,999 ರೂಪಾಯಿ. ಹೆಚ್ ಡಿ ಎಫ್ ಸಿ ಕಾರ್ಡ್ ಬಳಕೆದಾರರಿಗೆ ಫೋನ್ ಮೇಲೆ 1000 ರೂಪಾಯಿ ಕ್ಯಾಶ್ಬ್ಯಾಕ್ ಸಿಗ್ತಿದೆ. ಆಗಸ್ಟ್ 29 ರಿಂದ MI.com ಹಾಗೂ ಫ್ಲಿಪ್ಕಾರ್ಟ್ ನಲ್ಲಿ ಸಿಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...