alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು mi max 3 ಬಜೆಟ್ ಫ್ಯಾಬ್ಲೆಟ್

ಚೀನಾ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ Xiaomi, Mi Max 3 ಬಿಡುಗಡೆ ಮಾಡಿದೆ. ಇದು ಬಜೆಟ್ ಫ್ಯಾಬ್ಲೆಟ್ ಆಗಿದ್ದು, ಇದ್ರ ಡಿಸ್ಪ್ಲೇ ದೊಡ್ಡದಾಗಿದೆ. 6.9 ಇಂಚಿನ ಡಿಸ್ಪ್ಲೇ ಹೊಂದಿರುವ ಫ್ಯಾಬ್ಲೆಟ್ ಡ್ರೀಮ್ ಗೋಲ್ಡ್, ಅಚ್ಚ ನೀಲಿ ಹಾಗೂ ಕಪ್ಪು ಬಣ್ಣದಲ್ಲಿ ಲಭ್ಯವಿದೆ.

ಫ್ಯಾಬ್ಲೆಟ್ ಬ್ಯಾಟರಿ ಕೂಡ ವಿಶೇಷತೆ ಹೊಂದಿದೆ. ಕಂಪನಿ Mi Max 3ಗೆ 5,500 mAh ಬ್ಯಾಟರಿ ನೀಡಿದೆ. ಎರಡು ರೂಪಾಂತರದಲ್ಲಿ ಇದು ಲಭ್ಯವಿದೆ. 4 ಜಿಬಿ ರ್ಯಾಮ್ ಜೊತೆ 64 ಜಿಬಿ ಮೆಮೊರಿ ಕಾರ್ಡ್ ಹಾಗೂ 6 ಜಿಬಿ ರ್ಯಾಮ್ ಜೊತೆ 128 ಜಿಬಿ ಮೆಮೋರಿ ಕಾರ್ಡ್ ನ ಎರಡು ರೂಪಾಂತರದಲ್ಲಿ ಗ್ರಾಹಕರಿಗೆ ಸಿಗಲಿದೆ.

ಡ್ಯುಯಲ್ ಸಿಮ್ ಸೆಟಪ್ ಜೊತೆ ಡ್ಯುಯಲ್ ವರ್ಟಿಕಲ್ ರಿಯಲ್ ಕ್ಯಾಮರಾ ನೀಡಲಾಗಿದೆ. ಒಂದು ಲೆನ್ಸ್ 12 ಮೆಗಾಫಿಕ್ಸಲ್ ಹೊಂದಿದ್ದರೆ ಇನ್ನೊಂದು 5 ಮೆಗಾಪಿಕ್ಸಲ್ ಹೊಂದಿದೆ. ಸೆಲ್ಫಿಗಾಗಿ 8 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ಸಂಪರ್ಕಕ್ಕಾಗಿ 4G VoLTE, ವೈಫೋನ್, ಬ್ಲ್ಯೂ ಟ್ಯೂತ್ ಜೊತೆ ಯುಎಸ್ಬಿ ಟೈಪ್ ಸಿ ನೀಡಲಾಗಿದೆ.

4 ಜಿಬಿ ರ್ಯಾಮ್ ಫೋನ್ ಬೆಲೆ ಸುಮಾರು 17,300 ರೂಪಾಯಿ. 6 ಜಿಬಿ ರ್ಯಾಮ್ ಫೋನ್ ಬೆಲೆ 20,400 ರೂಪಾಯಿ. ಫೋನ್ ಬುಕ್ಕಿಂಗ್ ಜುಲೈ 20 ರಿಂದ ಶುರುವಾಗಲಿದೆ. ಭಾರತದಲ್ಲಿ ಈ ಸ್ಮಾರ್ಟ್ಫೋನ್ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...