alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಶ್ ಆನ್ ಡಿಲೆವರಿ ಸೌಲಭ್ಯ ಬಂದ್ ಮಾಡಿದ ಮೊಬೈಲ್ ಕಂಪನಿ

ಅತ್ಯಂತ ಕಡಿಮೆ ಬೆಲೆಯ ಹಾಗೂ ಮಲ್ಟಿ ಫೀಚರ್ ಫೋನನ್ನು ಭಾರತಕ್ಕೆ ಪರಿಚಯಿಸಿದ ಕಂಪನಿ xiaomi. ಇದು ಭಾರತಕ್ಕೆ ಪ್ರವೇಶ ಮಾಡ್ತಿದ್ದಂತೆ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. Xiaomi ಉತ್ಪನ್ನಕ್ಕೆ ಭಾರತದಲ್ಲಿ ಬಹುಬೇಡಿಕೆಯಿದೆ. ಗ್ರಾಹಕರ ಬೇಡಿಕೆ ಪೂರೈಸಲು xiaomi ಹಗಲು-ರಾತ್ರಿ ಮೊಬೈಲ್ ಉತ್ಪಾದನೆ ಮಾಡ್ತಿದೆ.

ಈ ಮಧ್ಯೆ xiaomi ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಕಾಳ ದಂದೆಗೆ ಕಡಿವಾಣ ಹಾಕಲು xiaomi ಮುಂದಾಗಿದೆ. ಕ್ಯಾಶ್ ಆನ್ ಡಿಲೆವರಿ ಸೌಲಭ್ಯ ನಿಲ್ಲಿಸುವುದಾಗಿ xiaomi ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ಹೇಳಿದ್ದಾರೆ. Xiaomi ಕ್ಯಾಶ್ ಆನ್ ಡಿಲೆವರಿ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವರು ಕಡಿಮೆ ಬೆಲೆಗೆ ಫೋನ್ ಖರೀದಿ ಮಾಡಿ ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರಂತೆ.

ಕಾಳ ಸಂತೆ ಬಗ್ಗೆ ಗ್ರಾಹಕರಿಂದ ಅನೇಕ ದೂರು ದಾಖಲಾದ ನಂತ್ರ xiaomi ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. Xiaomi ಇಂಡಿಯಾ ಉತ್ಪನ್ನಗಳ ಶೇಕಡಾ 57ರಷ್ಟು ಮಾರಾಟ ಆನ್ಲೈನ್ ನಲ್ಲಿ ನಡೆಯುತ್ತದೆ. ವಿಶೇಷ ಸೇಲ್ ಗಳಲ್ಲಿ ಕ್ಷಣದಲ್ಲಿಯೇ ಸ್ಟಾಕ್ ಖಾಲಿಯಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...