alex Certify
ಕನ್ನಡ ದುನಿಯಾ       Mobile App
       

Kannada Duniya

Xiaomi ಫೆಸ್ಟಿವಲ್ ಸೇಲ್ ಶುರು: 1 ರೂ.ಗೆ ಮೊಬೈಲ್

ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ಬಿಗ್ ಸೇಲ್ ಮುಗಿದಿದೆ. ಈಗ xiaomi ಸರದಿ. ಬುಧವಾರ ಸಂಜೆ 4 ಗಂಟೆಯಿಂದ xiaomi ಸೇಲ್ ಶುರುವಾಗಿದೆ. Xiaomi ತನ್ನ ಉತ್ಪನ್ನಗಳನ್ನು ಅಧಿಕೃತ ವೆಬ್ ಸೈಟ್ Mi.com ನಲ್ಲಿ ಮಾರಾಟ ಮಾಡ್ತಿದೆ. ಮಿ ಸೇಲ್ ನಲ್ಲಿ Xiaomi ತನ್ನ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ನೀಡ್ತಾಯಿದೆ.

ರೆಡ್ ಮಿ 4, ರೆಡ್ ಮಿ ನೋಟ್ 4, ಮಿ ಮ್ಯಾಕ್ಸ್ 2, ರೆಡ್ ಮಿ 4ಎ, ಮಿ ಎ1 ಆಂಡ್ರಾಯ್ಡ್ 1 ಫೋನ್ ಗಳ ಮೇಲೆ ರಿಯಾಯಿತಿ ಸಿಗ್ತಿದೆ. ಕಂಪನಿ Mi A ಫೋನನ್ನು ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಮಾಡಿದೆ. ಈ ಫೋನ್ ಗೂ ರಿಯಾಯಿತಿ ನೀಡ್ತಾಯಿದೆ,

ರೆಡ್ ಮಿ ನೋಟ್ 4 ಲೇಕ್ ಬ್ಲ್ಯೂ ಎಡಿಶನ್ ಮೇಲೂ ಕಂಪನಿ ಸೀಮಿತ ಸೇಲ್ ನೀಡುತ್ತಿದೆ. ಮೂರು ದಿನ ಈ ಸೇಲ್ ಇರಲಿದ್ದು, ಪ್ರತಿದಿನ ಬೆಳಿಗ್ಗೆ 11 ರಿಂದ 5 ಗಂಟೆಯವರೆಗೆ 1 ರೂಪಾಯಿ ಫ್ಲಾಶ್ ಸೇಲ್ ಕೂಡ ನಡೆಯಲಿದೆ. ಈ ಸೇಲ್ ನಲ್ಲಿ ಗ್ರಾಹಕರು ಕೇವಲ 1 ರೂಪಾಯಿಗೆ ಕಂಪನಿಯ ಹಲವು ಉತ್ಪನ್ನಗಳನ್ನು ಖರೀದಿಸಲಿದ್ದಾರೆ.

Redmi Note 4 3ಜಿಬಿ ಸ್ಮಾರ್ಟ್ಫೋನ್ ಮೇಲೆ ಸಾವಿರ ರೂಪಾಯಿ ರಿಯಾಯಿತಿ ಸಿಗ್ತಾಯಿದೆ.  ಅಂದ್ರೆ ಗ್ರಾಹಕರು ಈ ಫೋನನ್ನು 9,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. 4ಜಿಬಿ ಮಾಡೆಲ್ ಫೋನ್ 12,999 ರೂಪಾಯಿ ಬದಲಿ 10,999 ರೂಪಾಯಿಗೆ ಸಿಗ್ತಿದೆ. Xiaomi Redmi 4 ಫೋನ್ ಗೆ 1500 ರೂಪಾಯಿ ರಿಯಾಯಿತಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...