alex Certify
ಕನ್ನಡ ದುನಿಯಾ       Mobile App
       

Kannada Duniya

ವಾವ್ಹ್…! ನಾಲ್ಕು ರೂ.ಗೆ ಸಿಗ್ತಿದೆ 45 ಸಾವಿರ ರೂ. ಮೌಲ್ಯದ ಟಿವಿ

Xiaomi ಭಾರತದಲ್ಲಿ ವಾರ್ಷಿಕೋತ್ಸವದ ಸೇಲ್ ಶುರು ಮಾಡಿದೆ. ಮಂಗಳವಾರದಿಂದ ಸೇಲ್ ಶುರುವಾಗಿದೆ. Xiaomiಯ ನಾಲ್ಕು ರೂಪಾಯಿ ಸೇಲ್ ಎಲ್ಲರ ಗಮನ ಸೆಳೆಯಿತು. ನಾಲ್ಕನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಟಿವಿ ಸೇರಿದಂತೆ ಸ್ಮಾರ್ಟ್ಫೋನ್ ಗಳನ್ನು ನಾಲ್ಕು ರೂಪಾಯಿಗೆ ಸೇಲ್ ಮಾಡಿದೆ.

ನಾಲ್ಕು ರೂಪಾಯಿಗೆ ಸ್ಮಾರ್ಟ್ಫೋನ್, ಟಿವಿ ಖರೀದಿ ಮಾಡುವ ಆಸೆಯಲ್ಲಿದ್ದ ಗ್ರಾಹಕರಿಗೆ ನಿರಾಶೆಯಾಯ್ತು. ಸೇಲ್ ಶುರುವಾದ ಕೆಲವೇ ಸೆಕೆಂಡಿನಲ್ಲಿ ಫ್ಲಾಶ್ ಸೇಲ್ ಮುಕ್ತಾಯಗೊಂಡಿತ್ತು. ಟಿವಿ ಖರೀದಿ ಮಾಡಲು ಮುಂದಾಗಿದ್ದ ಗ್ರಾಹಕರ ಪ್ರಕಾರ ಸೇಲ್ ಸರಿಯಾಗಿ 4 ಸೆಕೆಂಡ್ ಕೂಡ ನಡೆಯಲಿಲ್ಲವಂತೆ. ನಾಲ್ಕೇ ಸೆಕೆಂಡಿನಲ್ಲಿ ಔಟ್ ಆಫ್ ಸ್ಟಾಕ್ ಆಯ್ತು ಎನ್ನುತ್ತಿದ್ದಾರೆ ಗ್ರಾಹಕರು.

ಈ ಸೇಲ್ ಇಂದು ಮತ್ತೆ ನಾಳೆ ನಡೆಯಲಿದೆ. ಎರಡೂ ದಿನ ಸಂಜೆ ನಾಲ್ಕು ಗಂಟೆಗೆ 4 ರೂಪಾಯಿ ಸೇಲ್ ನಡೆಯಲಿದೆ. ಟಿವಿ ಖರೀದಿ ಮಾಡಲಾಗದೆ ನಿರಾಶೆಗೊಂಡಿರುವ ಗ್ರಾಹಕರಿಗೆ ಇನ್ನೂ ಎರಡು ದಿನ ಅವಕಾಶವಿದೆ. ಮಂಗಳವಾರ ನಡೆದ ಸೇಲ್ ನಲ್ಲಿ Mi LED Smart TV 4 (55-ಇಂಚು)  (44,999 ರೂ.), Redmi Y2, Redmi Note 5 Pro ಮತ್ತು Mi Band 2 ಮಾರಾಟಕ್ಕಿತ್ತು.

ಸೇಲ್ ಗಾಗಿ Xiaomi ಎಸ್ಬಿಐ, ಪೇಟಿಎಂ ಮತ್ತು ಮೊಬಿಕ್ವಿಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಸ್ ಬಿ ಐ ಕಾರ್ಡಿನಲ್ಲಿ 7500 ಮೌಲ್ಯದ ವಸ್ತು ಖರೀದಿ ಮಾಡಿದ್ರೆ 500 ರೂಪಾಯಿ ರಿಯಾಯಿತಿ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...