alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಿಂದ ನ್ಯೂಯಾರ್ಕ್ ಗೆ ಹೋಗಲು 13,500 ರೂ.ಸಾಕು

ವಿಮಾನಯಾನ ಕಂಪನಿಗಳು ಆಗಾಗ ಪ್ರಯಾಣಿಕರನ್ನು ಸೆಳೆಯಲು ಹೊಸ ಹೊಸ ಆಫರ್ ನೀಡ್ತಿರುತ್ತವೆ. ಈಗ ಅಂತರಾಷ್ಟ್ರೀಯ ವಿಮಾನಯಾನ ಕಂಪನಿಯೊಂದು ಬಂಪರ್ ಆಫರ್ ನೀಡ್ತಿದೆ. ಈ ಪ್ಲಾನ್ ಅಡಿ ಪ್ರಯಾಣಿಕ ಕೇವಲ 13,500 ರೂಪಾಯಿಗೆ ದೆಹಲಿಯಿಂದ ನ್ಯೂಯಾರ್ಕ್ ಗೆ ಹೋಗಬಹುದು.

ಸಾಮಾನ್ಯವಾಗಿ ನವದೆಹಲಿಯಿಂದ ನ್ಯೂಯಾರ್ಕ್ ಗೆ ತೆರಳಲು ಸುಮಾರು 50 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದ್ರೆ ಶೀಘ್ರದಲ್ಲಿಯೇ ಈ ಖರ್ಚು 13,500 ಕ್ಕಿಳಿಯಲಿದೆ. ಐಸ್ಲ್ಯಾಂಡ್ ನ ಬಜೆಟ್ ಏರ್ಲೈನ್ಸ್ ವಾವ್ ಈ ಆಫರ್ ನೀಡ್ತಿದೆ. ಶೀಘ್ರದಲ್ಲಿಯೇ ದೆಹಲಿ-ಉತ್ತರ ಅಮೆರಿಕಾ ಮಧ್ಯೆ ಬಜೆಟ್ ವಿಮಾನ ಹಾರಾಟ ಮಾಡಲಿದೆ. ಅದ್ರ ಪ್ರಯಾಣ ದರ 13,500 ರೂಪಾಯಿಯಿರಲಿದೆ ಎಂದು ಸಿಇಒ ಸ್ಕುಲಿ ಹೇಳಿದ್ದಾರೆ.

ದೆಹಲಿಯಿಂದ ಅಮೆರಿಕಾಕ್ಕೆ ಹೋಗಲು ಬೇರೆ ಮಾರ್ಗ ಬಳಸುತ್ತೇವೆ. ಅದ್ರ ದೂರ ಕಡಿಮೆ ಇದೆ. ಹಾಗಾಗಿ ಖರ್ಚು ಕೂಡ ಕಡಿಮೆ ಬರಲಿದೆ ಎಂದಿದ್ದಾರೆ. ಸೀಟ್ ಹಾಗೂ ವಿಮಾನದಲ್ಲಿ ನೀಡುವ ವ್ಯವಸ್ಥೆ ಮೇಲೆ ಟಿಕೆಟ್ ದರದಲ್ಲಿ ಏರುಪೇರಾಗಲಿದೆ ಎಂದು ಸ್ಕುಲಿ ಹೇಳಿದ್ದಾರೆ. ಅತಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ನೀಡ್ತಿರುವ ಮೊದಲ ವಿಮಾನಯಾನ ಕಂಪನಿ ನಮ್ಮದಾಗಲಿದೆ ಎಂದು ಸಿಇಒ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...