alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 13,499 ರೂ.ಗೆ ದೆಹಲಿಯಿಂದ ವಾಷಿಂಗ್ಟನ್ ಗೆ ಹೋಗಲು ಸಿಗ್ತಿದೆ ಅವಕಾಶ

ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಮೆರಿಕಾ ಹಾಗೂ ಕೆನಡಾಕ್ಕೆ ಕೇವಲ 13,499 ರೂಪಾಯಿಯಲ್ಲಿ ವಿಮಾನ ಪ್ರಯಾಣ ಬೆಳೆಸಬಹುದು. ಐಸ್ಲ್ಯಾಂಡ್ನ ಏರ್ಲೈನ್ ​​ವಾವ್ ಪ್ರಯಾಣಿಕರಿಗೆ ಈ ಆಫರ್ ನೀಡ್ತಿದೆ.

ಮಾಹಿತಿ ಪ್ರಕಾರ, ಐಸ್ಲ್ಯಾಂಡ್ನ ಏರ್ಲೈನ್ ​​ವಾವ್ ವಿಮಾನ ದೆಹಲಿಯಿಂದ ಐಸ್ ಲೆಂಡ್ ರೇಕ್ಜಾವಿಕ್ ಗೆ ಡಿಸೆಂಬರ್ 7ರಂದು ಮೊದಲ ಹಾರಾಟ ಶುರು ಮಾಡಲಿದೆ. ಜೊತೆಗೆ ಕಂಪನಿ ಸಾಪ್ತಾಹಿಕ ಮೂರು ವಿಮಾನಗಳ ಹಾರಾಟದ ವಿವರ ನೀಡಿದೆ. ದಿನ ಕಳೆದಂತೆ ಇದನ್ನು ವಿಸ್ತರಿಸಲು ನಿರ್ಧರಿಸಿದೆ.

ವರದಿ ಪ್ರಕಾರ, ಪ್ರಯಾಣಿಕ 13,499 ರೂಪಾಯಿಗೆ ಚಿಕಾಗೊ, ಒರ್ಲ್ಯಾಂಡೊ, ನೆವಾರ್ಕ್, ಡೆಟ್ರಾಯಿಟ್, ಸ್ಯಾನ್ ಫ್ರಾನ್ಸಿಸ್ಕೋ, ಬಾಲ್ಟಿಮೋರ್, ಬಾಸ್ಟನ್, ಪಿಟ್ಸ್ಬರ್ಗ್, ಲಾಸ್ ಏಂಜಲೀಸ್, ವಾಷಿಂಗ್ಟನ್ ಡಿಸಿಗೆ ಪ್ರಯಾಣ ಬೆಳೆಸಬಹುದಾಗಿದೆ. ಟೊರೊಂಟೊ ಮತ್ತು ಮಾಂಟ್ರಿಯಲ್ ಗೂ ಇದೇ ಬೆಲೆ ನಿಗಧಿಯಾಗಿದೆ.

ಡಿಸೆಂಬರ್ 2018 ರಿಂದ ಮಾರ್ಚ್ 2019 ರವರೆಗೆ ಈ ಬೆಲೆಯಲ್ಲಿ ಪ್ರಯಾಣಿಕರು ಪ್ರಯಾಣ ಬೆಳೆಸಬಹುದಾಗಿದೆ. ಸೆಪ್ಟೆಂಬರ್ 18 ರಿಂದ ಬುಕ್ಕಿಂಗ್ ಶುರುವಾಗಿದ್ದು ಸೆಪ್ಟೆಂಬರ್ 28ರವರೆಗೆ ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...