alex Certify
ಕನ್ನಡ ದುನಿಯಾ       Mobile App
       

Kannada Duniya

ರೂಪಾಯಿ ಮೌಲ್ಯ ಕುಸಿತಕ್ಕೆ ಕಡಿವಾಣ ಹಾಕಲು ಚಿಂತನೆ

ನವದೆಹಲಿ: ಕುಸಿಯುತ್ತಿರುವ ರೂಪಾಯಿ ಮೌಲ್ಯದ ಕುರಿತು ಇದೇ ಮೊದಲ‌ ಬಾರಿಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರದ ಮೂಲಗಳು, ಅನಿವಾಸಿ‌ ಭಾರತೀಯರ(ಎನ್.ಆರ್.ಐ) ಸಹಾಯ ಪಡೆಯುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿವೆ.

ಏಷ್ಯಾದಲ್ಲೆ ಅತಿ ಹೆಚ್ಚು ಅಪಮೌಲ್ಯಗೊಂಡಿರುವ ಕರೆನ್ಸಿ ಎಂಬ ಅಪಖ್ಯಾತಿಗೆ ಪಾತ್ರವಾಗಿರುವ ಭಾರತೀಯ ರೂಪಾಯಿ ಸೋಮವಾರ ದಾಖಲೆಯ ಶೇ.1.4 ಕುಸಿತ ಕಂಡು ಕೊನೆಯಲ್ಲಿ ಸ್ವಲ್ಪ ಚೇತರಿಕೆ ಕಂಡಿತು.

ಆದರೆ ತೈಲ ದರದಲ್ಲಿ ಸತತ ಏರಿಕೆ ಮುಂದುವರೆದಿರುವ ಕಾರಣಕ್ಕೆ ತೈಲದ ಅತಿ ದೊಡ್ಡ ಆಮದು ದೇಶವಾದ ಭಾರತದ ವ್ಯಾಪಾರ ಮತ್ತು ಚಾಲ್ತಿ ಕೊರತೆ ಮತ್ತಷ್ಟು ಹಚ್ಚುವ ಆತಂಕದ ನಡುವೆ ರೂಪಾಯಿಯ ಈ ಚೇತರಿಕೆ ಕ್ಷಣಿಕ ಎನ್ನಿಸುತ್ತದೆ.

ಹಣಕಾಸು ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಬಿದ್ದಾಗ ಮಾರುಕಟ್ಟೆ ಮಧ್ಯ ಪ್ರವೇಶಿಸಲು ಸಿದ್ಧವಾಗಿವೆ ಎಂದು ಮೂಲಗಳು ಹೇಳಿವೆ.

ಏಪ್ರಿಲ್ ನಲ್ಲಿ ಆರ್.ಬಿ.ಐ. ಬಳಿ ಇದ್ದ ದಾಖಲೆಯ 426 ಶತಕೋಟಿ ಅಮೆರಿಕನ್ ಡಾಲರ್ ವಿದೇಶಿ‌ ವಿನಿಮಯ ನಿಧಿಯನ್ನು ಸಣ್ಣ ಮಟ್ಟದಲ್ಲಿ ಮಾರಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...